News

ಭಾರತೀಯ ಹವಾಮಾನ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿ

ಭಾರತೀಯ ಹವಾಮಾನ ಇಲಾಖೆಯು ದೇಶದ ರೈತರಿಗೆ ಸಿಹಿಸುದ್ದಿ ನೀಡಿದ್ದು, ಈ ವರ್ಷ ಮುಂಗಾರು ಮಳೆ ವಾಡಿಕೆಯಂತೆ ಇರಲಿದ್ದು, ನೈಋತ್ಯ ಮಾರುತವು ಜೂನ್ ಮೊದಲ ವಾರದಲ್ಲಿ ಪ್ರವೇಶಿಸಲಿದೆ ಎಂದು ಮುನ್ಸೂಚನೆ ನೀಡಿದೆ.

ಭಾರತದಲ್ಲಿ ಜೂನ್ ನಿಂದ ನಾಲ್ಕು ತಿಂಗಳ ಮುಂಗಾರು ಮಳೆ ಅವಧಿಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ. ದೀರ್ಘ ಕಾಲದ ಸರಾಸರಿ ಮಳೆ ಶೇ.100 ರಷ್ಟು ಸುರಿಯಲಿದೆ. ಶೇ. 96 ರಿಂದ ಶೇ. 104 ರ ವರೆಗಿನ ಮಳೆಯನ್ನು ಸಾಧಾರಣಾ ಅಥವಾ ವಾಡಿಕೆ ಮಳೆ ಎಂದು ವರ್ಗೀಕರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ರಾಜೀವನ್, ಮುಂಗಾರು ಹಂಗಾಮಿನ 4 ತಿಂಗಳ ಅವಧಿಯಲ್ಲಿ ಇಡೀ ವರ್ಷದಲ್ಲಿ ಸುರಿಯು ಮಳೆಯ ಶೇ. 75 ರಷ್ಟು ಮಳೆ ಬೀಳುತ್ತದೆ. ನೈಋತ್ಯ ಮಾರುತ ಸೆಪ್ಟೆಂಬರ್ ಹೊತ್ತಿಗೆ ರಾಜಸ್ಥಾನದ ಮೂಲಕ ನಿರ್ಗಮಿಸಲಿದೆ ಎಂದು ತಿಳಿಸಿದ್ದಾರೆ.

Trending

To Top