Film News

ಬಿಯರ್ಡ್ ಲುಕ್ ನಲ್ಲಿ ಗೋಲ್ಡನ್ ಸ್ಟಾರ್

ಲಾಕ್ ಡೌನ್ ಶುರುವಾದ ಬಳಿಕ ನಮ್ಮ ಸ್ಯಾಂಡಲ್ ವುಡ್ ನಟರೆಲ್ಲಾ ಮನೆಯಲ್ಲಿ ಕುಟುಂಬದೊಡನೆ ಕಾಲ ಕಳೆಯುತ್ತಿದ್ದಾರೆ. ಸದಾ ಶೂಟಿಂಗ್ ನಲ್ಲೇ ಬ್ಯುಸಿ ಇರುತ್ತಿದ್ದ ನಮ್ಮ ಚಂದನವನದ ತಾರೆಯರಿಗೆ ಕುಟುಂಬದ ಜೊತೆ ಈ ರೀತಿ ಸಮಯ ಕಳೆಯಲು ಹಿಂದೆಂದೂ ಅವಕಾಶ ಸಿಕ್ಕಿರಲಿಲ್ಲ.

ಇದನ್ನು ಸದುಪಯೋಗ ಪಡಿಸಿಕೊಂಡಿರುವ ನಮ್ಮ ತಾರೆಯರು ಮಡದಿಗೆ ಮನೆ ಕೆಲಸಗಳಲ್ಲಿ ಸಹಾಯ ಮಾಡುತ್ತಾ, ಮಕ್ಕಳ ಜೊತೆ ಹರಟುತ್ತಾ, ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಆವರೂ ಸಹ ಲಾಕ್ ಡೌನ್ ನಲ್ಲಿ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ.

ಕೆಲದಿನಗಳ ಹಿಂದೆ ಗಣೇಶ್ ಅವರ ಮಗಳು ಅಡುಗೆ ಮಾಡುತ್ತಿರುವ ಫೋಟೋಗಳನ್ನು ಶಿಲ್ಪಾ ಗಣೇಶ್ ಹಂಚಿಕೊಂಡಿದ್ದರು. ಹಾಗೂ ಟೀ ಕುಡಿಯುತ್ತಾ ಪುಸ್ತಕ ಓದುತ್ತಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು ಗಣೇಶ್. ಇದೀಗ ಗಣೇಶ್ ಅವರ ಕ್ವಾರಂಟೈನ್ ಲುಕ್ ಹೇಗಿದೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಬಿಯರ್ಡ್ ಲುಕ್ ಪೋಟೋ ಹಂಚಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್… “ಬಿಯರ್ಡ್ ಗಳೇ(ಗಡ್ಡ) ಹೊಸ ಸಿಕ್ಸ್ ಪ್ಯಾಕ್.. ಕ್ವಾರಂಟೈನ್ ಎಫೆಕ್ಟ್..’ ಎಂಬ ಶೀರ್ಷಿಕೆಯೊಂದಿಗೆ ಫೋಟೋ ಶೇರ್ ಮಾಡಿದ್ದಾರೆ.

Trending

To Top