Film News

ಬಿಡುಗಡೆಗೂ ಮುನ್ನ ದಾಖಲೆಯ ಬ್ಯುಸಿನೆಸ್ ಮಾಡಿದ ರಾಬರ್ಟ್ ಚಿತ್ರ! ಆಡಿಯೋ ರೈಟ್ಸ್ ಮತ್ತು ಸ್ಯಾಟಿಲೈಟ್ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೆನ್ಸೇಶನಲ್ ಸಿನಿಮಾ ರಾಬರ್ಟ್ ರಿಲೀಸ್​ಗೂ ಮುನ್ನ ಕೋಟಿ ಕೋಟಿ ಹಣ ಗಳಿಸಿದೆ ಎನ್ನಲಾಗಿದೆ. ಆಡಿಯೋ ರೈಟ್ಸ್ ಮತ್ತು ಸ್ಯಾಟಲೈಟ್ ಬುಸಿನೆಸ್​​ನಲ್ಲಿ ದಾಖಲೆಯ ಆಫರ್ ಗಿಟ್ಟಿಸಿಕೊಂಡಿದೆ ಎನ್ನುತ್ತಿವೆ ಮೂಲಗಳು.

ಪ್ರೀ ರಿಲೀಸಿಂಗ್ ಬಿಸಿನೆಸ್ ಬಗ್ಗೆ ದೊಡ್ಡ ದೊಡ್ಡ ಆಫರ್ ಬಂದಿದ್ದು, ಚಿತ್ರತಂಡ ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಪ್ರೀ ರಿಲೀಸಿಂಗ್ ಬಿಸಿನೆಸ್ ಬಗ್ಗೆ ನ್ಯೂಸ್ ಫಸ್ಟ್ ಗೆ ಚಿತ್ರತಂಡ ಮಾಹಿತಿ ನೀಡಿದೆ. ಪ್ರೀ ರಿಲೀಸಿಗೂ ಮುನ್ನ ರಾಬರ್ಟ್ ₹50 ಕೋಟಿಗೂ ಹೆಚ್ಚು ಬುಸಿನೆಸ್‌ ಮಾಡಿದೆ ಅನ್ನೋ ಸುದ್ದಿ ಇಂಡಸ್ಟ್ರಿಯಲ್ಲಿ ಹರಿದಾಡ್ತಿದೆ. ಏಪ್ರಿಲ್ 9 ರಂದು ರಾಬರ್ಟ್​ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

Trending

To Top