Kannada Reality Shows

ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಶಾಕ್, ಈ ವಾರ ಎಲಿಮಿನೇಷನ್ ಇಲ್ಲದಿದ್ದರೂ ಈ ಸ್ಪರ್ಧಿ ಹೊರಗೆ!ಯಾರು ಗೊತ್ತಾ ಅವರು?

ಈಗಾಗಲೇ 13 ವಾರಗಳನ್ನು ಮುಗಿಸಿರುವ ಬಿಗ್ ಬಾಸ್ 14 ನೇ ವಾರಕ್ಕೆ ಮುಕ್ತಾಯವಾಗಬೇಕಾಗಿತ್ತು. ಆದರೆ ಈ ಬಾರಿ ಹಾಗೆ ಆಗುತ್ತಿಲ್ಲ. ಇನ್ನು ಮೂರು ವಾರಗಳ ಕಾಲ ಬಿಗ್ ಬಾಸ್ ಸೀಸನ್ 7 ಇರಲಿದೆ. ನೂರು ದಿನಗಳಲ್ಲಿ ಮುಕ್ತಾಯವಾಗ ಬೇಕಾಗಿರುವ ಬಿಗ್ ಬಾಸ್ ಈ ಬಾರಿ 114 ದಿನಗಳಲ್ಲಿ ಮುಕ್ತಾಯವಾಗಲಿದೆ. ಆದರೆ ಈ ನಿರ್ಧಾರ ಏಕೆ ಅಂತ ಬಿಗ್ ಬಾಸ್ ಇನ್ನೂ ಸ್ಪಷ್ಟ ಪಡಿಸಿಲ್ಲ. ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೀತಿ ಎಲಿಮಿನೇಷನ್ ಇರುವುದಿಲ್ಲ. ಈ ವಾರ ನೋ ಎಲಿಮಿನೇಷನ್ ವೀಕ್ ಆದರೂ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಯಾರು ಗೊತ್ತಾ ಅವರು?

ಈ ವಾರದ ನಾಮಿನೇಶನ್ ಪ್ರಕಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಚಂದನ್ ಆಚಾರ, ಭೂಮಿ ಶೆಟ್ಟಿ, ಮತ್ತು ದೀಪಿಕಾ ದಾಸ್ ನಾಮಿನೇಟ್ ಆಗಿದ್ದು, ಎಲ್ಲ ಸ್ಪರ್ಧಿಗಳು ಈ ನಾಲ್ಕು ಜನರಲ್ಲಿ ಒಬ್ಬರು ಇಂದು ಮನೆಯಿಂದ ಹೊರ ಹೋಗುತ್ತಾರೆ ಎಂದು ಅಂದುಕೊಂಡಿದ್ದಾರೆ, ಇನ್ನೂ ಕಿಚ್ಚ ಸುದೀಪ್ ಅವರು ಕೂಡ ಈ ವಿಷಯವನ್ನು ಸ್ಪರ್ಧಿಗಳಿಗೆ ತಿಳಿಸದೆ ಎಂದಿನಂತೆ ಎಲಿಮಿನೇಷನ್ ನಡೆಸಿದ್ದೂ, ಒಬ್ಬ ಸ್ಪರ್ಧಿಯನ್ನು ಆಚೆ ಕಳುಹಿಸಿದ್ದಾರೆ.

ಸುದೀಪ್ ಅವರು ಎಲಿಮಿನೇಟ್ ಮಾಡಿರೋ ಸ್ಪರ್ಧಿ, ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮುಂದೆ ಮನೆಯಿಂದ ಆಚೆ ಬಂದಿದ್ದು ನೇರವಾಗಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಸೀಕ್ರೆಟ್ ರೂಮ್ ಸೇರಿದ ಆ ಸ್ಪರ್ಧಿ ಯಾರು ಎಂದು ಇನ್ನು ಕೆಲವು ಘಂಟೆಗಳಲ್ಲಿ ಗೊತ್ತಾಗಲಿದೆ.

Trending

To Top