Kannada Reality Shows

ಬಿಗ್ ಬಾಸ್ ‘ಶೈನ್ ಶೆಟ್ಟಿ’ಯ ಬಗ್ಗೆ ಮಾತನಾಡಿದ ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ..!

ಬಿಗ್ ಬಾಸ್ ಮನೆಯ ಜನಪ್ರಿಯ ಸ್ಪರ್ಧಿ ಶೈನ್ ಶೆಟ್ಟಿ ತಮ್ಮದೇ ಆದ ಟ್ಯಾಲೆಂಟ್ ನಿಂದ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಅಲ್ಲದೇ. ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ.

ಶೈನ್ ಶೆಟ್ಟಿ ಅವರು ಈಗಾಗಲೇ ಮನರಂಜನೆ, ಆಟದ ವಿಚಾರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ನಡುವೆ ಕನ್ನಡದ ಕಿರುತೆರೆ ನಟಿಯರಿಬ್ಬರು ಶೈನ್ ಶೆಟ್ಟಿಯ ಅಸಲಿ ಗುಣ ಬಿಚ್ಚಿಟ್ಟಿದ್ದಾರೆ.ಹೌದು, ಅಸಲಿ ಗುಣ ಎಂದಾಕ್ಷಣ ಶಾಕ್ ಆಗಬೇಡಿ.ಶೈನ್ ಶೆಟ್ಟಿಯ ಬಗ್ಗೆ ಒಂದಷ್ಟು ಒಳ್ಳೆಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶೈನ್ ಶೆಟ್ಟಿ ಬಗ್ಗೆ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ನಟಿ ನೇಹಾಗೌಡ ಮಾತನಾಡಿದ್ದಾರೆ. ಸೆಟ್‌ಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ಶೈನ್ ನಗಿಸುತ್ತಿದ್ದರು.

ನನಗೆ 8 ವರ್ಷಗಳಿಂದ ಶೈನ್ ಶೆಟ್ಟಿ ಪರಿಚಯವಿದೆ. ಎಷ್ಟೇ ಚೇಷ್ಟೆ, ತರಲೆ ಮಾಡಿದ್ರೂ ಕೂಡ ಶೈನ್ ಮನಸ್ಸಿಂದ ಎಲ್ಲರನ್ನು ಕೇರ್ ಮಾಡ್ತಾರೆ ಫಿನಾಲೆಗೆ ಬಂದೇ ಬಿಡುತ್ತಾರೆ, ಅವರು ಒಳ್ಳೆಯ ಪ್ರತಿಭಾವಂತ,. ಹೀಗಾಗಿ ನನ್ನ ಬೆಂಬಲ ಶೈನ್‌ಗಿದೆ. ಶೈನ್‌ಗೆ ಬಿಗ್ ಬಾಸ್ ಗೆಲ್ಲೋಕೆ ಸಹಾಯ ಮಾಡಿ. ಎಂದಿದ್ದಾರೆ ನಟಿ ಕಾವ್ಯಾ ಶಾಸ್ತ್ರಿ.

Trending

To Top