Kannada Reality Shows

ಬಿಗ್ ಬಾಸ್ ಮನೆಯಿಂದ ಹೊರಬಂದ್ರಾ ಚಂದನ್ ಆಚಾರ್ ?

ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಗಾಗಿಯೇ ಖ್ಯಾತಿ ಗಳಿಸಿದ್ದ ನಟ ಚಂದನ್ ಆಚಾರ್ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ನಡೆದ ಜಗಳಗಳೇ ಅವರಿಗೆ ಮುಳುವಾಯಿತೇ ಎನ್ನುವ ಸಂದೇಹಗಳು ಮೂಡುತ್ತಿದ್ದು, ಮನೆಯಲ್ಲಿ ಕಿರಿಕ್ ಮಾಡಿಕೊಳ್ಳುತ್ತಿದ್ದೂ ಜಾಲತಾಣಗಳಲ್ಲಿ ಅವರ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು.

ಬಿಗ್ ಬಾಸ್ ಮನೆಯವರ ಮನಸ್ಸು ಗೆಲ್ಲದಿದ್ದರೂ ನೇರ ಸ್ವಭಾವದಿಂದ ವೀಕ್ಷಕರಿಗೆ ಸರಿ ಎನಿಸಿದದ ಚಂದನ್ ಅವರು ತಾವು ಬಳಸುವ ಭಾಷೆ, ಪದದ ಮೇಲೆ ಹಿಡಿತ ಇಲ್ಲದೇ ಹೊರಬಂದ್ರಾ ಎಂಬ ಮಾತೂ ಇದೆ.

ಕಿಚ್ಚಾ ಸುದೀಪ್ ಅವರು ಈ ಕುರಿತು ಚಂದನ್ ಆಚಾರ್ ಅವರಿಗೆ ಹಲವಾರು ಬಾರಿ ವಾರ್ನ್ ಮಾಡಿದ್ರೂ ಚಂದನ್ ಅವರ ಕೆಲವು ಗುಣಗಳು ಬದಲಾಗಲಿಲ್ಲ.

Trending

To Top