Kannada Reality Shows

ಬಿಗ್ ಬಾಸ್ ಮನೆಯಿಂದ ಹರೀಶ್ ರಾಜ್ ಔಟ್.. .

ಬಿಗ್‌ಬಾಸ್‌ ಮಿಡ್‌ನೈಟ್‌ ಶಾಕ್ ಕೊಟ್ಟಿದ್ದಾರೆ. ಹರೀಶ್‌ ರಾಜ್‌ ಬಿಗ್‌ಬಾಸ್‌ ಮನೆಯಿಂದ ಔಟ್ ಆಗಿದ್ದಾರೆ. ಫೈನಲ್‌ ಹಂತದಲ್ಲಿ ಹರೀಶ್‌ ರಾಜ್‌ ಔಟ್‌ ಆಗಿದ್ದು, ಐವರು ಫಿನಾಲೆಗೆ ಹೋಗಿದ್ದಾರೆ. ಕುರಿ ಪ್ರತಾಪ್‌, ಶೈನ್‌ ಶೆಟ್ಟಿ, ವಾಸುಕಿ ವೈಭವ್‌, ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಬಿಗ್‌ಬಾಸ್‌ ಸೀಸನ್‌-7ರ ಫಿನಾಲೆ ತಲುಪಿದ್ದಾರೆ.

ಅಂದ್ಹಾಗೇ, ಕಳೆದ ವಾರ ಪ್ರಿಯಾಂಕಾ ಬಿಗ್‌ಬಾಸ್‌ ಮನೆಯಿಂದ ಔಟ್ ಆಗಿದ್ದರು. ಆದ್ರೆ, ವಾಸುಕಿ ಹೊರತುಪಡಿಸಿ ಯಾರು ಕೂಡ ಸಂಪೂರ್ಣವಾಗಿ ಸೇಫ್ ಆಗಿರಲಿಲ್ಲ. ಬಿಗ್‌ಬಾಸ್‌ ಫಿನಾಲೆ ವೀಕ್‌ನಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದ್ದರು. ವೀಕ್ಷಕರಿಗೆ ಸೋಮವಾರ ಮಧ್ಯರಾತ್ರಿವರೆಗೂ ವೋಟ್‌ ಮಾಡಲು ಅವಕಾಶ ನೀಡಲಾಗಿತ್ತು. ಹೀಗಾಗಿ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋ ಪ್ರಶ್ನೆ ಉದ್ಭವವಾಗಿತ್ತು. ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ.

ಹರೀಶ್‌ ರಾಜ್‌ ಬಿಗ್‌ಬಾಸ್‌ ಮನೆಯಲ್ಲಿ 106 ದಿನಗಳಿದ್ದರು. ಇದ್ದಷ್ಟು ದಿನ ನಕ್ಕು ನಲಿಸಿ, ಕಣ್ಣೀರಿಟ್ಟು, ಟಾಸ್ಕ್‌ಗಳಲ್ಲಿ ಅಗ್ರೆಸ್ಸಿವ್‌ ಆಗಿ ಆಡಿ ಲಕ್ಷಾಂತರ ಜನರ ಮನ ಗೆದ್ದಿದ್ದರು. ಮನೆಯ ಹಿರಿಯ ಸದಸ್ಯ ಅನ್ನೋ ಟ್ಯಾಗ್‌ ಕೂಡ ಅವರಿಗಿತ್ತು. ಮಿಡ್‌ನೈಟ್‌ ಔಟ್ ಆಗಿರೋ ಹರೀಶ್‌ ರಾಜ್‌ಗೆ ನೇರವಾಗಿ ಕಿಚ್ಚ ಸುದೀಪ್‌ರನ್ನ ಮೀಟ್ ಮಾಡೋ ಅವಕಾಶ ಸಿಗೋದಿಲ್ಲ. ಆದ್ರೆ, ಫಿನಾಲೆ ಎಪಿಸೋಡ್‌ನಲ್ಲಿ ಕಿಚ್ಚನನ್ನು ಹರೀಶ್‌ ರಾಜ್‌ ಮೀಟ್ ಮಾಡಲಿದ್ದಾರೆ. ತಮ್ಮ ಜರ್ನಿಯ ವಿಟಿ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

Trending

To Top