BBK8

ಬಿಗ್ ಬಾಸ್ ಮನೆಯಿಂದ ವಿಶ್ವನಾಥ್ ಎಲಿಮಿನೇಟ್ ಆಗಲು ಅಸಲಿ ಕಾರಣ ಏನು ನೋಡಿ !

ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಈಗಾಗಲೇ ಐವರು ಎಲಿಮಿನೇಟ್ ಆಗಿದ್ದಾರೆ.ಕಳೆದ ವಾರ ವೈಲ್ಡ್ ಕಾರ್ಡ್ ಮೂಲಕ ಎಂಟರೀ ಆಗಿದ ವೈಜಯಂತಿ ಅಡಿಗ ಅವರು ಷೋ ನ ಕ್ವಿಟ್ ಮಾಡಿ ಷೋ ಎಂದ ಹೊರ ನಡೆದರು ಆದ್ದರಿಂದ ಶಮಂತ್ ಅವರು ಎಲಿಮಿನೇಟ್ ಇಂದ ಬಚಾವ್ ಆಗಿದ್ದರು.ಆದರೆ ಈ ಬಾರು ಈ ರೀತಿಯ ಯಾವುದೇ ಅವಕಾಶಗಳು ಇರಲಿಲ್ಲ. ಎಲ್ಲರೂ ಶಮಂತ್ ಅವರು ಎಲಿಮಿನೇಟ್ ಆಗುತ್ತಾರೆ ಅಂದುಕೊಂಡಿದ್ದರು.ಆದರೆ ಎಲ್ಲರಿಗೂ ಶಾಕಿಂಗ್ ಎಂಬಂತೆ ವಿಶ್ವನಾಥ್ ಮನೆಯಿಂದ ಹೊರಬಂದಿದ್ದಾರೆ.

ಪ್ರತಿ ವಾರ ಸುದೀಪ್ ಅವರೇ ಈ ವಾರ ಯಾರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ ಎಂದು ಹೇಳುತ್ತಿದ್ದರು.ಆದರೆ ಈ ಬಾರಿ ಅವರಿಲ್ಲದ ಕಾರಣ ವಿಶೇಷವಾಗಿ ಎಲಿಮಿನೇಶನ್ ಪ್ರಕ್ರಿಯೆ ಮಾಡಲಾಗಿದೆ.ಮನೆಯಲ್ಲಿರುವ ಟಿವಿಯಲ್ಲಿ ನೋಮಿನೇಟ್ ಆದ ಸ್ಪರ್ದಿಯ ಬಿಗ್ ಬಾಸ್ ಮನೆಯ ಜರ್ನಿ ವಿಟಿಯ ವಿಡಿಯೋ ಪ್ರಸಾರ ಮಾಡಿ ಆ ಮೂಲಕ ಅವರನ್ನ ಎಲಿಮಿನೇಟ್ ಎಂದು ಘೋಷಿಸಲಾಯಿತು.

ಆರಂಭದಲ್ಲಿ ವಿಶ್ವ ಅವರು ಅಷ್ಟೇನು ಟಾಸ್ಕ್ ಉತ್ಸಾಹದಿಂದ ಬಾಗವಹಿಸಿರಲಿಲ್ಲ.ಅವರು ಒಬ್ಬ ಸಿಂಗರ್ ಆಗಿದ್ದರು ಕೂಡ ಮನೆಯವರನ್ನ ಹಾಗೂ ವೀಕ್ಷಕರ ಗಮನವನ್ನ ಸಹ ವಿಶ್ವ ಸೆಳೆಯಲಿಲ್ಲ, ತಮ್ಮಲ್ಲಿದ್ದ ಪ್ರತಿಭೆಯನ್ನ ಸಹ ತೋರ್ಪಡಲಿಲ್ಲ ಮತ್ತು ಕ್ಯಾಪ್ಟನ್ ಆದಾಗ ಸಹ ಅವರ ಪ್ರದರ್ಶನ ತೃಪ್ತಿದಾಯಕ ವಾಗಿರಲಿಲ್ಲ, ಇದನ್ನು ಸುದೀಪ್ ಅವರು ಕೂಡ ನೇರವಾಗಿ ಸಹ ಹೇಳಿದ್ದರು.ಇತರ ಸ್ಪರ್ದಿಗಳ ಜೊತೆಗೆ ಮನಸ್ತಾಪಗಳು ಆಗುತ್ತದೆ ಎನ್ನುವ ಬಯಕ್ಕೆ ಅವರು ಯಾರಿಗೂ ನೇರವಾಗಿ ಏನನ್ನೂ ಹೇಳುತ್ತಿರಲಿಲ್ಲ ಇದನ್ನು ಸಹ ಸುದೀಪ್ ಅವರು ಗಮನಿಸಿ ಹೇಳಿದ್ದರು.

ಈ ಅಂಶಗಳಿಂದ ವಿಶ್ವನಾಥ್ ಅವರಿಗೆ ಕಡಿಮೆ ವೋಟ್ ಗಳು ಬಂದಿರುವ ಸಾಧ್ಯತೆ ಇದೆ, ಇದರಿಂದ ಈ ವಾರ ವಿಶ್ವನಾಥ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಬಹುದು.

Trending

To Top