News

‘ಬಿಗ್ ಬಾಸ್’ ಮನೆಯಿಂದ ‘ರಾಜು ತಾಳಿಕೋಟೆ’ ಔಟ್..!

ಬಿಗ್ ಬಾಸ್ ಕನ್ನಡ ಸೀಸನ್ 7 ವಾರದ ಬಿಗ್ ಬಾಸ್ ಎಲಿಮಿನೇಷನ್ ನಡೆದಿದ್ದು, ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

ಹೌದು, ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದರು, ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ ಎಂಬ ವಿಚಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಒಂಬತ್ತು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ರಾಜು ತಾಳಿಕೋಟೆ ಮನೆಯಿಂದ ಹೊರಬಿದ್ದಿದ್ದಾರೆ ಎಂದು ತಿಳಿದು ಬಂದಿದೆ, ಈ ಎಪಿಸೋಡ್ ನಾಳೆ ಅಧಿಕೃತವಾಗಿ ಪ್ರಸಾರವಾಗಲಿದೆ.

ಈ ವಾರ ರಾಜು ತಾಳಿಕೋಟೆ, ವಾಸುಕಿ ವೈಭವ್, ಶೈನ್ ಶೆಟ್ಟಿ, ಚೈತ್ರಾ ಕೋಟೂರು, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ಕಿಶನ್ ನಾಮಿನೇಟ್ ಆಗಿದ್ದು, ಈ ಪೈಕಿ ರಾಜು ತಾಳಿಕೋಟೆಗೆ ಬಿಗ್ ಬಾಸ್ ಗೇಟ್ ಪಾಸ್ ನೀಡಿದೆ.

Trending

To Top