Uncategorized

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪುಟ್ಟಗೌರಿ

ಬಿಗ್ ಬಾಸ್ ಮನೆಗೆ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ನಟಿ ರಂಜಿನಿ ರಾಘವನ್ ಎಂಟ್ರಿ ಕೊಟ್ಟಿದ್ದಾರೆ

ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ರಂಜಿನಿ ಬಿಗ್ ಮನೆಯನ್ನು ಪ್ರವೇಶಿಸಿದ್ದಾರೆ. ಈ ವೇಳೆ ಸ್ಪರ್ಧಿಗಳು ರಂಜಿನಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ರಂಜಿನಿ ಸ್ಪರ್ಧಿಗಳಿಗೆ ಕರ್ನಾಟಕ ಜಿಲ್ಲೆಯ ಬಗ್ಗೆ ಪಾಠ ಮಾಡಿದ್ದಾರೆ. ಜೊತೆಗೆ ಸ್ಪರ್ಧಿಗಳು ಮಾಡಿದ ಅಕ್ಷರ ತಪ್ಪುಗಳನ್ನು ಸರಿಪಡಿಸಿದ್ದಾರೆ. ರಂಜಿನಿ ಜೊತೆ ಮನೆಯ ಸದಸ್ಯರು ಖುಷಿಯಿಂದ ಕಾಲ ಕಳೆದಿರುವುದು ಪ್ರೋಮೋದಲ್ಲಿ ಕಾಣಬಹುದು.

ಈ ಕಾರ್ಯಕ್ರಮ ಶುರುವಾಗುವ ಮೊದಲು ರಂಜಿನಿ ಅವರಿಗೆ ಬಿಗ್ ಬಾಸ್ ಆಫರ್ ನೀಡಲಾಗಿತ್ತು. ಆದರೆ ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಾರಣ ರಂಜನಿ ಈ ಆಫರ್ ಅನ್ನು ನಿರಾಕರಿಸಿದರು. ಆದರೆ ಈಗ ರಂಜಿನಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡುವುದರ ಮೂಲಕ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಸದ್ಯ ರಂಜಿನಿ ಅವರು ತಮ್ಮ ಧಾರಾವಾಹಿಯನ್ನು ಪ್ರಮೋಟ್ ಮಾಡಲು ಬಿಗ್ ಮನೆಗೆ ಪ್ರವೇಶಿಸಿದ್ದಾರೆ.

ರಂಜಿನಿ, ಪುಟ್ಟಗೌರಿ ಮದುವೆ ಧಾರಾವಾಹಿ ನಂತರ ಕನ್ನಡತಿ ಸೀರಿಯಲ್ ಮೂಲಕ ಕಿರುತೆರೆಗೆ ರೀ-ಎಂಟ್ರಿ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ರಂಜಿನಿ ಕನ್ನಡ ಉಪನ್ಯಾಸಕಿಯಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಇದೇ ಸೋಮವಾರದಿಂದ ಶುರುವಾಗಲಿದೆ.

Trending

To Top