gossip

‘ಬಿಗ್ ಬಾಸ್’: ದೀಪಿಕಾ ವಿಚಾರದಲ್ಲಿ ಶೈನ್ ಶೆಟ್ಟಿ ಅಚ್ಚರಿ ನಿರ್ಧಾರ

ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆಗೆ ನೀಡಲಾಗಿದ್ದ ಚಟುವಟಿಕೆಯಲ್ಲಿ ಹೆಚ್ಚು ಸ್ಪರ್ಧಿಗಳ ಬೆಂಬಲ ಪಡೆದ ಕಿಶನ್ ಕ್ಯಾಪ್ಟನ್ ಆಗಿದ್ದಾರೆ.

ಚಂದನ್, ಭೂಮಿ ಶೆಟ್ಟಿ, ಕಿಶನ್ ಈ ವಾರ ಕ್ಯಾಪ್ಟನ್ ಆಯ್ಕೆಗೆ ಭಾಗಿಯಾಗಿದ್ದರು. ಮನೆಯ ಸ್ಪರ್ಧಿಗಳ ಬೆಂಬಲ ಪಡೆದ ಕಿಶನ್ ಕ್ಯಾಪ್ಟನ್ ಆಗಿದ್ದು ಇದಕ್ಕೆ ಭೂಮಿ ಬೇಸರವಾಗಿ ಕಣ್ಣೀರಿಟ್ಟಿದ್ದಾರೆ. ಹರೀಶ್ ರಾಜ್ ಸೀರೆಯುಟ್ಟು ಮಹಿಳಾ ಪಾತ್ರಧಾರಿಯಾಗಿ ಗಮನಸೆಳೆದಿದ್ದಾರೆ.

ಮನೆಯಲ್ಲಿ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಬಿಗ್ ಬಾಸ್ ಸೂಚನೆಯಂತೆ ಕಷ್ಟಪಟ್ಟು ಅಡುಗೆ ಮಾಡಿದ್ದು ವಿಶೇಷವಾಗಿತ್ತು. ಇನ್ನು ಮುಂದಿನ ವಾರಕ್ಕೆ ಡಬಲ್ ಎಲಿಮಿನೇಷನ್ ಇರುವುದರಿಂದ ಈ ವಾರ ನಾಮಿನೇಷನ್ ಇರುವುದಿಲ್ಲ. ಆದರೆ ಮನೆಯಲ್ಲಿನ ಸ್ಪರ್ಧಿಗಳಿಗೆ ಅದು ತಿಳಿದಿಲ್ಲ.

‘ಬಿಗ್ ಬಾಸ್’ ಸೂಚನೆಯಂತೆ ಸ್ಪರ್ಧಿಗಳೆಲ್ಲ ನಾಮಿನೇಟ್ ಮಾಡಿದ್ದಾರೆ.

ನಾಮಿನೇಟ್ ಮಾಡುವ ಸಂದರ್ಭದಲ್ಲಿ ಶೈನ್ ಶೆಟ್ಟಿ ದೀಪಿಕಾ ದಾಸ್ ಅವರ ಹೆಸರು ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ. ಇದುವರೆಗೂ ದೀಪಿಕಾ ಹೆಸರನ್ನು ಸೂಚಿಸದ ಶೈನ್ ಈ ವಾರ ದೀಪಿಕಾ ಹೆಸರನ್ನು ಸೂಚಿಸಿದ್ದಾರೆ. ಈ ವಾರ ಯಾರೂ ಹೊರಗೆ ಹೋಗಲ್ಲ. ಮುಂದಿನ ವಾರ ಇಬ್ಬರು ಮನೆಯೊಂದ ಹೊರಗೆ ಹೋಗಲಿದ್ದಾರೆ ಎನ್ನಲಾಗಿದೆ.

Trending

To Top