Film News

ಬಟರ್ ಫ್ಲೈ ಅಂತೆ ಹಾರಲು ರೆಡಿಯಾಗಿದ್ದಾರೆ ನಟಿ ಪಾರುಲ್ ಯಾದವ್ !

ಹಿಂದಿಯಲ್ಲಿ ತೆರೆಕಂಡು ಬಹಳ ಮನ್ನಣೆ ಗಳಿಸಿದ್ದ ‘ಕ್ವೀನ್‌’ ಚಿತ್ರದ ಕನ್ನಡ ಅವತರಣಿಕೆ ‘ಬಟರ್‌ಫ್ಲೈ’. ಈ ಚಿತ್ರವನ್ನು ಕನ್ನಡ ಮತ್ತು ತಮಿಳ್ ನಲ್ಲಿ ರಮೇಶ್ ಅರವಿಂದ್ ಅವರು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಬಟರ್ ಫ್ಲೈ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಕೂಡ ಸಿಕ್ಕಿದೆ. ಆದರೆ ಬಿಡುಗಡೆ ಯಾವಾಗ ಎಂದು ಇನ್ನು ತಿಳಿದಿಲ್ಲ.

ಕ್ವೀನ್‌ ಚಿತ್ರದಲ್ಲಿ ಕಂಗನಾ ನಿರ್ವಹಿಸಿದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಅವರು ನಿರ್ವಹಿಸಿದ್ದಾರೆ, ಗೋಕರ್ಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಪಾರುಲ್. ‘ಈ ಚಿತ್ರವನ್ನು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ಚಿತ್ರತಂಡಕ್ಕೆ ಇರುವುದರಿಂದ ತಡವಾಗುತ್ತಿದೆ ಎಂಬ ಸುದ್ದಿ ಹೊರಬಂದಿದೆ. ಕನ್ನಡ ಮತ್ತು ಮಲಯಾಳ ಆವೃತ್ತಿಗಳಿಗೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದ್ದು, ತೆಲುಗು ಮತ್ತು ತಮಿಳು ಆವೃತ್ತಿಗಳಿಗೆ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ’ ಎಂದು ಪಾರುಲ್ ಯಾದವ್ ತಿಳಿಸಿದ್ದಾರೆ.

ತೆಲುಗು ಮತ್ತು ತಮಿಳು ಆವೃತ್ತಿಗಳಿಗೆ ಪ್ರಮಾಣಪತ್ರ ಸಿಗದಿರುವುದಕ್ಕೆ ಕಾರಣ ಲಾಕ್‌ಡೌನ್‌. ಕನ್ನಡ ಮತ್ತು ಮಲಯಾಳ ಸಿನಿಮಾಗಳು ಸಿದ್ಧವಿದ್ದರೂ, ನಾಲ್ಕೂ ಭಾಷೆಗಳ ಸಿನಿಮಾಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಬೇಕು ಎಂಬ ಉದ್ದೇಶದಿಂದ ಇವುಗಳ ಬಿಡುಗಡೆಯನ್ನೂ ತಡೆಹಿಡಿಯಲಾಗಿದೆ.

ಲಾಕ್‌ಡೌನ್‌ ತೆರವಾಗಿ, ಸಿನಿಮಾ ಮಂದಿರಗಳ ಬಾಗಿಲು ತೆರೆದ ತಕ್ಷಣ ಬಟರ್‌ಫ್ಲೈ ಚಿತ್ರವನ್ನು ತೆರೆಗೆ ತರಬೇಕು ಎಂಬ ಉದ್ದೇಶ ಪಾರುಲ್ ಅವರದ್ದು.

Trending

To Top