News

ಫೆಡ್‌ ಕಪ್‌ಗೆ ಮರಳಿದ ಸಾನಿಯಾ ಮಿರ್ಜಾ

ಡಬಲ್ಸ್‌ ತಾರೆ ಸಾನಿಯಾ ಮಿರ್ಜಾ ಅವರು ನಾಲ್ಕು ವರ್ಷಗಳ ಬಳಿಕ ಭಾರತೀಯ ಫೆಡ್‌ ಕಪ್‌ ತಂಡಕ್ಕೆ ಮರಳಿದ್ದಾರೆ. ಫೆಡ್‌ ಕಪ್‌ ತಂಡ ವನ್ನು ಪ್ರಕಟಿಸಲಾಗಿದ್ದು ಸಾನಿಯಾ ಅವರಲ್ಲದೇ ಅಗ್ರ ಕ್ರಮಾಂಕದ ಸಿಂಗಲ್ಸ್‌ ಆಟಗಾರ್ತಿ ಅಂಕಿತಾ ರೈನಾ ಕೂಡ ಇದ್ದಾರೆ.

ಸಾನಿಯಾ ಈ ಹಿಂದೆ 2016ರಲ್ಲಿ ಫೆಡ್‌ ಕಪ್‌ ಕೂಟದಲ್ಲಿ ಆಡಿದ್ದರು. 2017ರ ಅಕ್ಟೋಬರ್‌ ಬಳಿಕ ಕುಟುಂಬದ ಜತೆ ಹೆಚ್ಚಿನ ಸಮಯ ಇರಲು ಟೆನಿಸ್‌ನಿಂದ ದೂರ ಉಳಿದಿದ್ದರು.

ರಿಯಾ ಭಾಟಿಯಾ, ರುತುಜಾ ಬೋಸ್ಲೆ ಮತ್ತು ಕರ್ಮಾನ್‌ ಕೌರ್‌ ಥಂಡಿ ತಂಡದಲ್ಲಿರುವ ಉಳಿದ ಮೂವರು ಆಟಗಾರ್ತಿಯರಾಗಿದ್ದಾರೆ. ಡಬ್ಲ್ಯುಟಿಎ ಸಿಂಗಲ್ಸ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 180ನೇ ಸ್ಥಾನದಲ್ಲಿರುವ ಅಂಕಿತಾ ತಂಡದಲ್ಲಿರುವ ಗರಿಷ್ಠ ರ್‍ಯಾಂಕಿನ ಆಟಗಾರ್ತಿ ಆಗಿದ್ದಾರೆ.

ಮಾಜಿ ಡೇವಿಸ್‌ ಕಪ್‌ ಆಟಗಾರ ವಿಶಾಲ್‌ ಉಪ್ಪಲ್‌ ತಂಡದ ನಾಯಕ ಮತ್ತು ಅಂಕಿತಾ ಭಾಂಬ್ರಿ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Trending

To Top