News

ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಸೌಂಥ್ ಇಂಡಿಯಾ ಎಂಬ ಕಾರ್ಮಿಕ ಒಕ್ಕೂಟಕ್ಕೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್

ಕೊರೋನಾ ವೈರಸ್ ವಿಶ್ವದಾದ್ಯಂತ ತನ್ನ ಆರ್ಭಟವನ್ನು ಮುಂದುವರಿಸಿದೆ. ಇದರಿಂದ ಪ್ರತಿಯೊಬ್ಬರು ಕಂಗಾಲಾಗಿರುವುದಂತೂ ಸತ್ಯ. ಇನ್ನು ಚಿತ್ರೋದ್ಯಮ ಕೂಡ ಇದರ ಹೊರತಾಗಿಲ್ಲ , ಇಡೀ ದೇಶದಾದ್ಯಂತ ಚಿತ್ರ ಚಟುವಟಿಕೆಗಳು ಸ್ಥಗಿತಗೊಂಡಿದೆ. ಚಿತ್ರರಂಗದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವ ಅದೆಷ್ಟೋ ಮಂದಿ ದಿನನಿತ್ಯದ ಬದುಕು ತುಂಬಾ ಕಷ್ಟಕರವಾಗಿದೆ.

ಇದನ್ನು ಗಮನಿಸಿದ ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಐವತ್ತು ಲಕ್ಷ ಹಣವನ್ನು ನೀಡಿದ್ದಾರಂತೆ. ದಕ್ಷಿಣ ಭಾರತ ಕಾರ್ಮಿಕರ ಒಕ್ಕೂಟವು ಕೊರೋನಾ ವೈರಸ್ ನಿಂದ ಚಿತ್ರ ಚಟುವಟಿಕೆಗಳು ಇಲ್ಲದೆ ಅನುಭವಿಸುತ್ತಿರುವ ಸಮಸ್ಯೆಯನ್ನು ಅರಿತ ರಜನಿಕಾಂತ್ ಅವರು ಫಿಲ್ಮ್ ಎಂಪ್ಲಾಯ್ಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ ಯೂನಿಯನ್ ವರ್ಕರ್ಸ್ ಗೆ ಹಣವನ್ನು ನೀಡಿದ್ದಾರಂತೆ.

ಇದೊಂದು ಉತ್ತಮ ಬೆಳವಣಿಯಾಗಿದೆ. ಇದೇ ರೀತಿ ಎಲ್ಲ ರಾಜ್ಯಗಳಲ್ಲೂ ನಡೆದರೆ ಎಷ್ಟೋ ಕಾರ್ಮಿಕರ ಬದುಕು ತಕ್ಕಮಟ್ಟಿಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುತ್ತದೆ.

Trending

To Top