gossip

ಫಿಲ್ಟರ್ ಇಲ್ಲದೆ ಮಾತಾಡಿ ಹೆಣ್ಮಕ್ಕಳ ಕೆಂಗಣ್ಣಿಗೆ ಗುರಿಯಾದ ಚಂದನ್ ಆಚಾರ್

ಬಿಗ್ ಬಾಸ್ ಸೀಸನ್ ಏಳರಲ್ಲಿ ಚಂದನ್ ಆಚಾರ್ ಅವರಂಥ ಪೆಕ್ಯುಲಿಯರ್ ಕ್ಯಾರೆಕ್ಟರ್ ಈಗ ಬಹುತೇಕ ಮಂದಿಗೆ ಇಷ್ಟವಾಗಿದ್ದಾರೆ.

ಪ್ರಾರಂಭದಲ್ಲಿ ಮುಂಗೋಪಿಯಂತೆ ಕಾಣುತ್ತಿದ್ದ ಚಂದನ್ ಅವರ ಅಸಲಿ ಕ್ಯಾರಕ್ಟರ್ ಅನ್ನು ಜನ ಇಷ್ಟ ಪಡೋಕೆ ಶುರು ಮಾಡಿದ್ದಾರೆ.

ಚಂದನ್ ಅವರು ನಿನ್ನೆ ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಫಿಲ್ಟರ್ ಇಲ್ಲದೆ ಮಾತನಾಡಿ ಮನೆಯ ಹೆಣ್ಮಕ್ಕಳ ಕೋಪಕ್ಕೆ ಗುರಿಯಾದರು.

ಬಿಗ್ ಬಾಸ್ ಮನೆಗೆ ಮೊದಲಬಾರಿ ಬಂದಾಗ ಏನನ್ನಿಸ್ತು ಎಂದು ಸುದೀಪ್ ಅವರು ಕೇಳಿದಾಗ, ಬೆಳಗ್ಗೆ ಹೆಣ್ಣುಮಕ್ಕಳನ್ನು ಯಾರು ಎಂದೇ ಗುರುತಿಸಲಾಗಲಿಲ್ಲ. ಮೇಕಪ್ ಇಲ್ಲದೆ ಅವರನ್ನು ಕಂಡುಹಿಡಿಯೋದು ಕಷ್ಟವಾಯಿತು ಎಂದರು. ಪಕ್ಕದಲ್ಲೇ ಕುಳಿತಿದ್ದ ದೀಪಿಕಾ ದಾಸ್ ಅವರು ಒಮ್ಮೆ ಚಂದನ್ ಅವರನ್ನು ದುರುಗುಟ್ಟಿ ನೋಡಿದರು. ಮಿಕ್ಕ ಹೆಣ್ಣುಮಕ್ಕಳೂ ಸಹ ಚಂದನ್ ಅವರ ಮೇಲೆ ಕೋಪ ಮಾಡಿಕೊಂಡರು

Trending

To Top