Film News

ಪ್ರಭಾಸ್ ಜೊತೆ ನಟಿಸಲು ದೀಪಿಕಾ ಪಡುಕೋಣೆ ಕೇಳಿದ ಹಣವೆಷ್ಟು ?

ಸಧ್ಯ ಪ್ರಭಾಸ್ ಅವರು ತಮ್ಮ 20ನೆ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರದ ಚಿತ್ರೀಕರಣ ಶೇ.40 ರಷ್ಟು ಮುಗಿದಿದ್ದು , ಲಾಕ್ ಡೌನ್ ಮುಗಿದ ನಂತರ ಉಳಿದ ಕೆಲಸಗಳು ಮುಂದುವರೆಯಲಿದೆ.

ಪ್ರಭಾಸ್ ಅವರ 20ನೆ ಚಿತ್ರಕ್ಕಿಂತ 21ನೆ ಚಿತ್ರ ಸಖತ್ ಸೌಂಡ್ ಮಾಡುತ್ತಿದೇ. ಈ ಚಿತ್ರವನ್ನು ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನ ಮಾಡಲಿದ್ದು. ಇದು ರಾಜಮೌಳಿ ಅವರ ಸಿನಿಮಾಗಳಿಗಿಂತ ದೊಡ್ಡ ಬಜೆಟ್ ನಲ್ಲಿ ತಯಾರು ಮಾಡುವ ಯೋಜನೆಯಲ್ಲಿದೆ ಚಿತ್ರತಂಡ .

ಈ ಚಿತ್ರಕ್ಕೆ ನಾಯಕಿಯಾಗಿ ನಟಿಸಲು ದೀಪಿಕಾ ಪಡುಕೋಣೆ ಅವರ ಜೊತೆ ಮಾತುಕತೆ ನಡೆಸಿದ್ದು , ಪ್ರಭಾಸ್ ಜೊತೆ ನಟಿಸಲು 25 ಕೋಟಿ ಸಂಭಾವನೆ ಕೇಳಿದ್ದಾರಂತೆ ದೀಪಿಕಾ… ಇಷ್ಟು ಸಂಭಾವನೆ ಕೊಟ್ಟು ದೀಪಿಕಾರನ್ನು ಕಾಲಿವುಡ್ ಗೆ ತರಲಿದ್ದಾರ ನಿರ್ದೇಶಕ ನಾಗ್ ಅಶ್ವಿನ್ ಎಂದು ಕಾದು ನೋಡಬೇಕು .

Trending

To Top