Karnataka

ಪೌರಕಾರ್ಮಿಕರಿಗೋಸ್ಕರ ಮಾಸ್ಕ್ ಹೊಲೆಯುತ್ತಿದ್ದಾರೆ ಬೆಂಗಳೂರಿನ ಇಬ್ಬರು ಶಾಲಾ ಮಕ್ಕಳಾದ ನವ್ಯ ಮುರಳಿ ನಿರ್ವ ಮುರಳಿ !

ಕೊರೊನಾ ವಿರುದ್ಧ ಹೋರಾಟಕ್ಕೆ ಇಡೀ ದೇಶವೇ ತೊಡಗಿಕೊಂಡಿದೆ. ಸಾಮಾನ್ಯ ಜನರು ಮನೆಯಲ್ಲಿ ಇರುವುದರ ಮೂಲಕ ಕೊರೊನಾ ಹರಡದಂತೆ ತಡೆಗಟ್ಟುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗಳು, ವೈದ್ಯರು, ನರ್ಸ್ ಗಳು ಹಗಲು ರಾತ್ರಿ ಎನ್ನದೆ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಸಿನಿಮಾ ನಟ ನಟಿಯರು , ಕ್ರೀಡಾ ಪಟುಗಳು, ದೊಡ್ಡ ಉದ್ಯಮಿಗಳು ದೇಣಿಗೆ ನೀಡುತ್ತಿದ್ದಾರೆ , ಬಡ ಜನರಿಗೆ ಪ್ರಾಣಿಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ… ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದೇಶಕ್ಕಾಗಿ ಕೊರೊನಾ ವಿರುದ್ಧ ಹೊರಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಇಬ್ನರು ಪುಟ್ಟ ಅಕ್ಕ ತಂಗಿಯರು ವಿಶೇಷ ಸೇವೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. . ಈ ಮಕ್ಕಳು ಪೌರ ಕಾರ್ಮಿಕರಿಗಾಗಿ ತಮ್ಮ ಕೈಯಾರೆ ತಾವೇ ಮಾಸ್ಕ್‌ ತಯಾರಿಸಿ ಕೊಟ್ಟು ಗಮನ ಸೆಳೆದಿದ್ದಾರೆ.

ಬೆಂಗಳೂರಿನ ಸದಾಶಿವ ನಗರದ ನಿವಾಸಿಗಳಾದ ನವ್ಯ ಮರುಳಿ (12 ವರ್ಷ) ಮತ್ತು ನಿರ್ವ ಮುರಳಿ (10) ಯಲಹಂಕ ಸಮೀಪ ಇರುವ ವಿದ್ಯಾಶಿಲ್ಪ ಅಕಾಡೆಮಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.. ಏಳನೇ ತರಗತಿ ವಿದ್ಯಾರ್ಥಿನಿ ನವ್ಯಳ ಹುಟ್ಟುಹಬ್ಬ ಕಳೆದ ಫೆಬ್ರವರಿಯಲ್ಲಿ ನಡೆಯಿತು, ಹುಟ್ಟುಹಬ್ಬದ ಆಚರಿಸಿದ ಸಮಯದಲ್ಲಿ ನವ್ಯಾಳ ತಂದೆ ತಮ್ಮ ಮಗಳಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಹೊಲಿಗೆ ಯಂತ್ರವೊಂದನ್ನು ನೀಡಿದ್ದರು. ಅದನ್ನು ಸದುಪಯೋಗ ಪಡಿಸಿಕೊಂಡಿರುವ ನವ್ಯ ತನ್ನ ಸೋದರಿ ಜತೆ ಸೇರಿ ಮಾಸ್ಕ್‌ ತಯಾರಿಕೆಯಲ್ಲಿ ತೊಡಗಿದ್ದಾಳೆ.

”ರಸ್ತೆಯಲ್ಲಿಪೌರ ಕಾರ್ಮಿಕರು ಮುಖಕ್ಕೆ ಮಾಸ್ಕ್‌ ಇಲ್ಲದಿರುವುದನ್ನು ನೋಡಿದೆ. ಸೀರೆಯ ಅಂಚು ಹಾಗೂ ಬಟ್ಟೆಯಿಂದ ಮುಖ ಮುಚ್ಚಿಕೊಳ್ಳುವುದು ಅಷ್ಟು ಸರಿ ಕಾಣದು. ಕೊರೊನಾ ಸೋಂಕು ಅವರಿಗೆ ತಗುಲಬಾರದೆಂಬ ಕಳಕಳಿಯಿಂದ ತಂದೆ ಕೊಡಿಸಿದ್ದ ಹೊಲಿಗೆ ಯಂತ್ರದ ಸಹಾಯದಿಂದ ಹತ್ತು ದಿನಗಳಲ್ಲಿ 150 ಮಾಸ್ಕ್‌ ತಯಾರಿಸಿದ್ದೇವೆ,” ಎಂದು ಹೇಳಿದ್ದಾರೆ ನವ್ಯ
”ನಿತ್ಯ 20 ಮಾಸ್ಕ್‌ ತಯಾರಿಸುತ್ತಿದ್ದೇವೆ. ಬೆಳಗಿನ ತಿಂಡಿ ಮುಗಿಸಿ ಮಾಸ್ಕ್‌ ತಯಾರಿಕೆಯಲ್ಲಿ ತೊಡಗುತ್ತೇವೆ. ಮಧ್ಯೆ ಊಟ ಹಾಗೂ ಕೆಲ ಸಮಯ ವಿಶ್ರಾಂತಿ ಕೂಡ ಪಡೆಯುತ್ತೇವೆ. ನಮ್ಮ ಶ್ರಮದಿಂದ ನಗರ ಶುಚಿಗೊಳಿಸುವವರಿಗೆ ಒಂದಿಷ್ಟು ಸಹಾಯ ಮಾಡಿದ ಸಾರ್ಥಕತೆ ಇದೆ” ಎನ್ನುತ್ತಾರೆ ನಿರ್ವ ..

ಈ ಮಕ್ಕಳ ಕೆಲಸವು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ..

Trending

To Top