Film News

ಪುನೀತ್ ರಾಜ್ ಕುಮಾರ್ ನಿರ್ಮಾಣದ ‘ಮಾಯಾಬಜಾರ್ 2016’ ಸಿನಿಮಾಡ ಟ್ರೈಲರ್ ಬಿಡುಗಡೆಯಾಗಿದೆ!

​ಸ್ಟಾರ್​ ಪುನೀತ್ ರಾಜ್​ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್​ ಅಡಿಯಲ್ಲಿ ನಿರ್ಮಾಣವಾಗಿರುವ ‘ಮಾಯಾ ಬಜಾರ್’ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ. ನಾಯಕ ನಟ ರಿಷಿ ಅಭಿನಯದ ‘ಕವಲುದಾರಿ’ ಸಿನಿಮಾ ನಿರ್ಮಾಣ ಮಾಡಿದ್ದ ಪುನೀತ್ ರಾಜ್​ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್ಸ್​​ ಈಗ ಮತ್ತೊಮ್ಮೆ ವಿಭಿನ್ನ ಕಥಾಹಂದರವಿರುವ ಸಿನಿಮಾವನ್ನು ತೆರೆಗೆ ತರಲು ಮುಂದಾಗಿದೆ.

ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ರಾಧಾಕೃಷ್ಣ ರೆಡ್ಡಿ ‘ಮಾಯಾಬಜಾರ್’ ಸಿನಿಮಾಗೆ ಆ್ಯಕ್ಷನ್- ಕಟ್ ಹೇಳಿದ್ದಾರೆ. ಈ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಮತ್ತು ಎಂ. ಗೋವಿಂದು ನಿರ್ಮಿಸಿದ್ದಾರೆ. ಇಂದು ಸಂಜೆ ಪುನೀತ್ ರಾಜ್​ಕುಮಾರ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದ ವಿಶೇಷ ಹಾಡೊಂದಕ್ಕೆ ಅಪ್ಪು ಹೆಜ್ಜೆ ಹಾಕಿರುವುದು ವಿಶೇಷ.

ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ಹೊಂದಿರುವ ‘ಮಾಯಾಬಜಾರ್ ‘ ಸಿನಿಮಾ ಟ್ರೈಲರ್ ಬಿಡುಗಡೆಯಾಗಿ ಕೇವಲ 1 ಗಂಟೆಯೊಳಗೆ​ ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ. ಕಳ್ಳನೋಟಿನ ದಂಧೆಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಈ ಸಿನಿಮಾದಲ್ಲಿ ಕಾಮಿಡಿಗೂ ಕೊರತೆಯಿಲ್ಲ ಎಂಬುದು ಟ್ರೈಲರ್​ ನೋಡಿದರೆ ತಿಳಿಯುತ್ತದೆ.

Trending

To Top