Film News

ಪವರ್ ಫುಲ್ ಸಂದೇಶ ನೀಡಿದ ನಟಿ ತಮನ್ನಾ

ಅನೇಕ ಬಾಲಿವುಡ್, ಹಾಲಿವುಡ್ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ಕಲಾವಿದರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಆಂದೋಲನಕ್ಕೆ ಒಗ್ಗಟ್ಟಿನಿಂದ ಕೈಜೋಡಿಸಿದ್ದಾರೆ. ಮೇ 25 ರಂದು ಮಿನ್ನಿಯಾಪೋಲಿಸ್‌ನಲ್ಲಿ 46 ವರ್ಷದ ಆಫ್ರಿಕನ್-ಅಮೇರಿಕನ್ ಜಾರ್ಜ್ ಫ್ಲಾಯ್ಡ್ ಅವರ ಕ್ರೂರ ಸಾವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. #blackouttuesday #blacklivesmatter ಎಂಬ ಹ್ಯಾಶ್‌ ಟ್ಯಾಗ್ ಗಳನ್ನು ಶುರು ಮಾಡಲಾಗಿದೆ.

ದಕ್ಷಿಣ ಭಾರತದ ಖ್ಯಾತ ನಟಿಯರಾದ ಸಮಂತಾ ಅಕ್ಕಿನೇನಿ, ತ್ರಿಶಾ ಕೃಷ್ಣನ್ ಮುಂತಾದವರು #BlackouttTuesday ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ನಟಿ ತಮನ್ನಾ ಭಾಟಿಯಾ ಕೂಡ ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ #blacklivesmatter ಬಗ್ಗೆ ಪ್ರಬಲವಾದ ವಿಷಯವನ್ನು ಹಂಚಿಕೊಂಡಿದ್ದು, ‘ಆಲ್ ಲೈವ್ಸ್ ಮ್ಯಾಟರ್’ ಎಂಬ ಸಂದೇಶವನ್ನು ರವಾನಿಸಿದ್ದಾರೆ..

ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ ತಮನ್ನಾ, ಆ ಫೋಟೋದಲ್ಲಿ ತಮನ್ನಾ ಅವರ ಮುಖದ ಮೇಲೆ ಕಪ್ಪು ಬಣ್ಣದ ಮಸಿಯನ್ನು ಬಳಿಯಲಾಗಿದೆ, ಕತ್ತಿನವರೆಗೂ ಮಸಿಯಿಂದಲೇ ಇದೆ.

“ನಿಮ್ಮ ಮೌನವು ನಿಮ್ಮನ್ನು ರಕ್ಷಿಸುವುದಿಲ್ಲ. ಮನುಷ್ಯ ಅಥವಾ ಪ್ರಾಣಿ ಯಾವುದೇ ಆಗಲಿ, ಪ್ರತಿಯೊಂದು ಜೀವವೂ ಮುಖ್ಯವಲ್ಲವೇ? ಯಾವುದೇ ರೀತಿಯ ಜೀವರಾಶಿಯನ್ನು ಮ್ಯೂಟ್ ಮಾಡುವುದು ಸಾರ್ವತ್ರಿಕ ಕಾನೂನಿಗೆ ವಿರುದ್ಧವಾಗಿದೆ. ನಾವು ಈಗಾಗಲೇ ಕಲಿತಿರುವುದನ್ನು ಮರೆತು ಮನುಷ್ಯರಾಗಲು ಮತ್ತೊಮ್ಮೆ ಕಲಿಯಬೇಕು, ಸಹಾನುಭೂತಿಯನ್ನು ವ್ಯಕ್ತಪಡಿಸಬೇಕು ಮತ್ತು ಪ್ರೀತಿಯನ್ನು ಅಭ್ಯಾಸ ಮಾಡಬೇಕು. # ಅಲ್‌ಲೈವ್ಸ್‌ಮ್ಯಾಟರ್ #ವೇಕ್‌ಅಪ್ವರ್ಲ್ಡ್..” ಎಂದು ಬರೆದಿದ್ದಾರೆ ತಮನ್ನಾ..

Trending

To Top