gossip

ನಾವೇನೂ ಸತ್ತು ಹೋಗಿದ್ದೀವಾ ಭೂಮಿ..? ವಾಸುಕಿ ಹೀಗ್ಯಾಕೆ ಹೇಳಿದರು?

ಶೈನ್ ಶೆಟ್ಟಿ, ವಾಸುಕಿ ವೈಭವ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹೆಲ್ಪ್ ಮಾಡಿಲ್ಲ ಅಂತಾ ಭೂಮಿ ಬೇಸರ ಮಾಡಿಕೊಂಡಿದ್ದರು. ಆದ್ಮೇಲೆ ಏನಾಯ್ತೋ ಏನೋ ಒಬ್ಬರೇ ಇರೋಕೆ ಶುರು ಮಾಡಿದ್ದರು. ಎಲ್ಲರ ಜೊತೆ ಇದ್ದರೂ ಇಲ್ಲದಂತೆ ವರ್ತಿಸುತ್ತಿದ್ದರು. ಒಂದು ರೀತಿ ಅವರು ‘ಏಕಾಂಗಿ’ಯಾಗ್ಬಿಟ್ಟೆ ಅನ್ನೋ ಫೀಲಿಂಗ್‌ನಲ್ಲಿದ್ದರು. ಅದರಲ್ಲೂ ಚಂದನಾ ಹೋದ್ಮೇಲಂತೂ ಭೂಮಿ ಸ್ವಲ್ಪ ಮಟ್ಟಿಗೆ ಕುಗ್ಗಿ ಹೋಗಿದ್ದರು. ಇದನ್ನೆಲ್ಲಾ ಅಬ್ಸರ್ವ್ ಮಾಡಿರೋ ವಾಸುಕಿ ಮತ್ತು ಶೈನ್‌, ಭೂಮಿಗೆ ಕಿವಿ ಮಾತು ಹೇಳಿದ್ದಾರೆ.

ಪ್ರಿಯಾಂಕಾ ಸರಿಯಾಗಿ ರೆಸ್ಪಾಂಡ್ ಮಾಡೋದಿಲ್ಲ ಅನ್ನೋದು ಭೂಮಿ ಕಂಪ್ಲೇಂಟ್‌. ಬಾತ್‌ರೂಮ್ ಏರಿಯಾದಲ್ಲಿ ಪ್ರಿಯಾಂಕಾ ಬಗ್ಗೆ ಶೈನ್ ಮತ್ತು ವಾಸುಕಿಗೆ ಹೇಳ್ತಿದ್ದ ಭೂಮಿ ಕಣ್ಣೀರಿಟ್ಟರು. ಅವಳು ನೀನು ನನ್ನ ಬೆಸ್ಟ್ ಫ್ರೆಂಡ್ ಅಂತಾಳೆ.

ಪದೇ ಪದೇ ಬೇಜಾರು ಮಾಡಿಕೊಂಡು ಒಂದು ಜ್ಹೋನ್‌ಗೆ ಹೋಗೋದು ಡೇಂಜರ್ ಜ್ಹೋನ್‌. ಇತ್ತೀಚೆಗೆ ನೀನು ತುಂಬಾ ಐಸೋಲೇಟ್‌ ಆಗಿದ್ಯಾ. ಚಂದನಾ ಹೋದ್ಮೆಲಂತೂ ಫುಲ್‌ ಐಸೋಲೇಟ್ ಆಗ್ಬಿಟ್ಟಿದ್ದಿಯಾ. ಎಲ್ಲರೂ ಇರೋ ಜಾಗದಲ್ಲಿ ನೀನು ಇರು. ನಾಮಿನೇಟ್‌ ಮಾಡೋದಕ್ಕೆ ರೀಸನ್ ಕೊಡಬೇಡಿ. ಚೆನ್ನಾಗಿ ಪರ್ಫಾಮ್‌ ಮಾಡಿದ್ಯೋ ಇಲ್ವೋ, ಸೈಲೆಂಟಾಗಿ ಕುಳಿತುಕೊಂಡ್ರೆ ನಿನಗೆ ನೆಗೆಟಿವ್‌ ಆಗುತ್ತೆ. ಚಂದನಾ ಡಲ್ ಆಗಿರೋಥರಾ ಫೀಲ್ ಕೊಟ್ರು. ಮೂರು ವಾರಗಳಿಂದ ಸತತವಾಗಿ ಬೇಸರದಲ್ಲಿದ್ದರು. ನಿಂದೂ ಒಂದಿಷ್ಟು ತಲೆಯಿದ್ಯಾಲ್ಲಾ ಅದನ್ನ ಉಪಯೋಗಿಸು ಅಂತಾ ಶೈನ್ ಭೂಮಿಗೆ ಬುದ್ಧಿವಾದ ಹೇಳಿದರು. ವಾಸುಕಿ ಕೂಡ ನೀನು ಒಬ್ಬಂಟಿಯಾಗಿ ಯಾಕೆ ಇರ್ತೀಯಾ. ನಾನೇನು ಸತ್ತು ಹೋಗಿದ್ದೀವಾ ಅಂತಾ ಭೂಮಿ ಮೇಲೆ ಬೇಸರಗೊಂಡರು.

ಇಬ್ಬರು ಸ್ನೇಹಿತರು ಬುದ್ಧಿವಾದ ಹೇಳೋದರ ಜೊತೆಗ ಭೂಮಿಯ ಪ್ರತಿಯೊಂದು ವೀಕ್‌ನೆಸ್‌ ಕೂಡ ಬಹಿರಂಗಗೊಳಿಸಿದರು. ಅರ್ಥಾತ್ ಇವರಿಬ್ಬರಿಗೆ ಭೂಮಿಯ ವೀಕ್‌ನೆಸ್‌ ಏನು ಅನ್ನೋದು ಪಕ್ಕಾ ಗೊತ್ತಾದಂತಿದೆ. ಸ್ನೇಹಿತರ ಕಿವಿಮಾತು ಭೂಮಿಗೆ ಪ್ಲಸ್ ಆಗುತ್ತೋ ಅಥವಾ ಮೈನಸ್‌ ಆಗುತ್ತೋ ಗೊತ್ತಿಲ್ಲ. ಬಟ್‌ ಬೇಸರದಲ್ಲಿದ್ದ ಮನಸ್ಸಿಗೆ ಸಾಂತ್ವನ ಹೇಳಿದರು.

Trending

To Top