Film News

ನಾನು ಮತ್ತು ಗುಂಡ ಚಿತ್ರಕ್ಕೆ ಸುದೀಪ್ ಮೆಚ್ಚುಗೆ …

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜು ಕೆ.ಆರ್.ಪೇಟೆ ನಾಯಕ ನಟನಾಗಿ ಅಬಿನಯಿಸಿರುವ ನಾನು ಮತ್ತು ಗುಂಡ ಚಿತ್ರ ತಂಡಕ್ಕೆ ಸೌತ್​ ಸೂಪರ್​ ಸ್ಟಾರ್​ ಕಿಚ್ಚ ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಪೊಸ್ಟರ್​ ವೊಂದನ್ನ ತಮ್ಮ ಟ್ವೀಟ್​ ಖಾತೆಯಲ್ಲಿ ಪೋಸ್ಟ್​ ಮಾಡಿ. ಈ ಚಿತ್ರದ ಬಗ್ಗೆ ಉತ್ತಮ ವಿಮರ್ಶೆಗಳನ್ನು ಕೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇನ್ನ, ಉತ್ತಮ ಚಿತ್ರ ನೀಡಿದರ ಬಗ್ಗೆ ನಾನು ಮತ್ತು ಗುಂಡ ಚಿತ್ರ ತಂಡಕ್ಕೆ ಅಭಿನಯ ಚಕ್ರವರ್ತಿ ಸುದೀಪ್​ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿ ಶುಭಕೊರಿದ್ದಾರೆ.

ಚಿತ್ರದ ಬಿಡುಗಡೆಗೂ ಮುನ್ನಾ ಏರ್ಪಡಿಸಲಾಗಿದ್ದ ಸೆಲೆಬ್ರಟಿ ಶೋನಲ್ಲಿ ಚಿತ್ರವನ್ನ ನೋಡಿ ಬಂದ ಸ್ಯಾಂಡಲ್​ ವುಡ್​ ತಾರೆಯರು ಚಿತ್ರಕ್ಕೆ ಉತ್ತಮ ಪ್ರಶಂಸೆಯನ್ನ ವ್ಯಕ್ತಪಡಿಸಿದ್ದಾರೆ.

Trending

To Top