Film News

ನವರಸ ನಾಯಕ ಜಗ್ಗೇಶ್ ಅವರ ಅಭಿಮಾನಿಗಳಿಂದ ಮಹತ್ತರವಾದ ಕೆಲಸ

ಲಾಕ್ ಡೌನ್ನಿಂದಾಗಿ ಬಡವರು, ನಿರ್ಗತಿಕರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಇಂತವರ ನೆರವಿಗೆ ಹಲವಾರು ಸಂಘ-ಸಂಸ್ತೆಗಳು, ದಾನಿಗಳು ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಸದ್ಯ ತುಮಕೂರಿನ ಕೊರಟಗೆರೆ ಫ್ರೆಂಡ್ಸ್ ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿಗಳು ಕೂಡ ಪ್ರತಿನಿತ್ಯ ಸಾವಿರಾರು ಬಡಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಪ್ರಸ್ತುತ ತುರ್ತು ಸಮಯದಲ್ಲಿ ಭಿಕ್ಷುಕರಿಗೆ ಮತ್ತು ನಿರಾಶ್ರಿತರಿಗಾಗಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕೊರಟಗೆರೆ ಫ್ರೆಂಡ್ಸ್ ಗ್ರೂಪ್ ಆಹಾರದ ಕಿಟ್ ವಿತರಣೆ ಮಾಡ್ತಿದೆ. ಇವರಿಗೆ ನವರಸ ನಾಯಕ ಜಗ್ಗೇಶ್ ಅಭಿಮಾನಿಗಳು ಸಹ ಕೈ ಜೊಡಿಸಿದ್ದಾರೆ‌.

ಈ ದಾಸೋಹ ಕಾರ್ಯಕ್ಕೆ ಮಠದ ಭಕ್ತರು ಕೂಡ ಪ್ರತಿನಿತ್ಯ ಒಬ್ಬೊಬ್ಬರಂತೆ ದಾಸೋಹ ಸೇವೆ ಸಲ್ಲಿಸುತ್ತಿದ್ದು, ಸಹಕಾರ ನೀಡಿದ ಎಲ್ಲರಿಗೂ ಸ್ವಾಮೀಜಿ ಧನ್ಯವಾದ ತಿಳಿಸಿದ್ದಾರೆ.

Trending

To Top