Film News

ನಟ ಮಹೇಶ್ ಬಾಬು ಮನೆಗೆ ಗಿಫ್ಟ್ ಕಳಿಸಿಕೊಟ್ಟ ರಶ್ಮಿಕಾ

ಕೋವಿಡ್19 ಹರಡುವಿಕೆ ಶುರುವಾದಾಗಿನಿಂದಲೂ ಪ್ರಯಾಣ ಬೆಳೆಸಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಸ್ನೇಹಿತರ ಜೊತೆ ಹ್ಯಾಂಡ್ ಶೇಕ್ ಮಾಡಲು, ಹೊರಗಡೆ ಹೋಗಿ ಸ್ನೇಹಿತರನ್ನು ಭೇಟಿಯಾಗವುದನ್ನು ನಿಲ್ಲಿಸಿದ್ದಾರೆ.

ಈ ರೀತಿಯ ಸಮಯದಲ್ಲಿ ಸ್ನೇಹಿತರಿಗೆ ಗಿಫ್ಟ್ ಕಳಿಸುವುದು ಕನಸಿನ ಮಾತು. ಆದರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಲಾಕ್ ಡೌನ್ ನಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಗಿಫ್ಟ್ ಕಳಿಸಿದ್ದಾರೆ. ಇದೊಂದು ಸ್ಪೆಷಲ್ ಮಾನ್ಸೂನ್ ಗಿಫ್ಟ್ ಆಗಿದೆ..

ತಮ್ಮ ತೋಟದಲ್ಲಿ ಬೆಳೆದಿರುವ ಬಟರ್ ಫ್ರೂಟ್, ಮಾವಿನ ಕಾಯಿ, ಜೇನು ತುಪ್ಪ ಸೇರಿದಂತೆ ಇನ್ನಷ್ಟು ಆರ್ಗ್ಯಾನಿಕ್ ವಸ್ತುಗಳನ್ನು ಕೊಡಗಿನಿಂದ ಹೈದರಾಬಾದ್ ಗೆ ಕಳಿಸಿದ್ದಾರೆ ರಶ್ಮಿಕಾ. ರಶ್ಮಿಕಾ ಕಳಿಸಿರುವ ಗಿಫ್ಟ್ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್.

“ಕೂರ್ಗ್ ಇಂದ ಇಂತಹ ರುಚಿಕರವಾದ ವಸ್ತುಗಳನ್ನು ಕಳಿಸಿಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು ರಶ್ಮಿಕಾ. ಕೋವಿಡ್ 19 ಸಮಯದಲ್ಲಿ ಇದು ನಮಗೆ ಸಿಕ್ಕ ಮೊದಲ ಗಿಫ್ಟ್ ಹ್ಯಾಂಪರ್. ಮ್ಯಾಂಗೋ ಪಿಕಲ್ .. ಹ್ಯಾಪಿ ಮಾನ್ಸೂನ್..” ಎಂದು ಪೋಸ್ಟ್ ಮಾಡಿ ಕೊಡಗಿನ ಕುವರಿಗೆ ಧನ್ಯವಾದ ಹೇಳಿದ್ದಾರೆ ಮಹೇಶ್ ಬಾಬು ಅವರ ಪತ್ನಿ ನಟಿ ನಮ್ರತಾ..

https://www.instagram.com/p/CB_FTvgD8Gh/?igshid=1mcmtxgf1i1j0

Trending

To Top