Saturday, May 21, 2022
HomeEntertainmentನಟಿ ಅಮೂಲ್ಯ ಮನೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ..

ನಟಿ ಅಮೂಲ್ಯ ಮನೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ..

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮನೆಗೆ ಗೋವುಗಳನ್ನ ಕರೆಸಿದ್ದಾರೆ. ಅವುಗಳಿಗೆ ಪೂಜೆ ಮಾಡಿ ಅದ್ದೂರಿಯಾಗಿ ಸಂಕ್ರಾತಿ ಹಬ್ಬವನ್ನ ಆಚರಿಸಿದ್ದಾರೆ. ಅಮೂಲ್ಯ ಹಾಗೂ ಪತಿ ಜಗದೀಶ್ ಸೇರಿ ಸಂಕ್ರಾತಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದಾರೆ. ಅಮೂಲ್ಯ ಅವರು ಗೋವಿಗೆ ಪೂಜೆ ಮಾಡುತ್ತಿರುವ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಮಕರ ಸಂಕ್ರಾತಿ ಹಬ್ಬದ ಶುಭಾಶಯಗಳನ್ನು ಕೋರಿದ ಅಮೂಲ್ಯ, ನಮ್ಮ ಮನೆಗೆ ಸಂಕ್ರಾತಿ ಹಬ್ಬದ ದಿನ ಗಂಗೆ ಮತ್ತು ದ್ರೌಪದಿ ಎಂಬ ಹೊಸ ಅಥಿತಿಗಳ ಆಗಮನವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅಮೂಲ್ಯ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ.

ತುಂಬು ಗರ್ಭಿಣಿ ಆಗಿರುವ ಅಮೂಲ್ಯ ಫೋಟೋ ಶೂಟ್ ಮಾಡಿಸಿರುವ ಫೋಟೋಗಳು ಬಾರಿ ವೈರಲ್ ಆಗಿತ್ತು. ಈ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾದುತ್ತಿದ್ದಾರೆ.

- Advertisement -

You May Like

More