Film News

ನಟಿ ಅನು ಪ್ರಭಾಕರ್ ಕೊರೊನಾ ಸೋಂಕಿನ ಬಗ್ಗೆ ಹೇಳೋದೇನು ನೋಡಿ!

ಕೊರೋನ ಮಹಾಮಾರಿಗೆ ಸಾಮಾನ್ಯ ಜನರು ಮಾತ್ರ ಹೊರತಾಗಿಲ್ಲ ನಟಿ ಅನು ಪ್ರಭಾಕರ್ ಅವರು ಸಹ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ.ಅನು ಪ್ರಭಾಕರ್ ಅವರ ಕಷ್ಟಕ್ಕೆ ಸರ್ಕಾರವು ಸಹ ಸ್ಪಂದಿಸುತ್ತಿಲ್ಲ.ಸೆಲೆಬ್ರಿಟಿಗಳ ಗತಿಯೇ ಹೀಗಾದರೆ ಇನ್ನು ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ ಅನು ಪ್ರಭಾಕರ್.ಸರ್ಕಾರ ವಿಫಲವಾಗುತ್ತಿರುವ ಬಗ್ಗೆ ಎಲ್ಲಾರಿಗೂ ಸಹ ಬೇಸರವಾಗಿದೆ ಅದೇ ರೀತಿ ಅನು ಪ್ರಭಾಕರ್ ಅವರು ಸಹ ಇದರ ಬಗ್ಗೆ ಧ್ವನಿ ಎತ್ತಿದ್ದಾರೆ.

ಅನು ಪ್ರಭಾಕರ್ ಅವರ ಆರೋಗ್ಯದ ಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಅಭಿಮಾನಿಗಳಿಗೆ ಬಹಳ ಕುತೂಹಲ ಇದೆ. ಏಪ್ರಿಲ್ 17 ರಂದು ಅನು ಪ್ರಭಾಕರ್ ಅವರಿಗೆ ಪಾಸಿಟಿವ್ ದೃಢವಾಯಿತು, ಇಷ್ಟು ದಿನ ಕಳೆದರು ಕೂಡ ಬಿಬಿಎಂಪಿ ಅವರ ಕಡೆಯಿಂದ ಒಂದು ಫೋನ್ ಕರೆಯು ಸಹ ಅನು ಪ್ರಭಾಕರ್ ಅವರಿಗೆ ಬರಲಿಲ್ಲ, ಬೇಸರವಾಗಿರುವ ಅನು ಪ್ರಭಾಕರ್ ಅವರು ಟ್ವೀಟರ್ ಮೂಲಕ ಸಂದೇಶವನ್ನು ತಿಳಿಸಿದ್ದಾರೆ.”ನನಗೆ ಸೋಂಕು ದೃಢವಾಗಿ 6 ದಿನಗಳು ಕಳೆದಿದೆ, ಅಲ್ಲದೆ ಕೋವಿಡ್ ರಿಪೋರ್ಟ್ ವೆಬ್ಸೈಟ್ ನಲ್ಲಿ ಇನ್ನು ಸಹ ಅಪ್ಲೋಡ್ ಆಗಿಲ್ಲ, ಇಷ್ಟು ದಿನ ಬೇಕಾ ಇದನ್ನು ಅಪ್ಲೋಡ್ ಮಾಡೋದಕ್ಕೆ, ನನಗೆ ಇನ್ನು ಬಿಯು ನಂಬರ್ ಸಿಕ್ಕಿಲ್ಲ ಇದನ್ನು ಆರೋಗ್ಯ ಸಚಿವ ಸುಧಾಕರ್ ಅವರ ಗಮನಕ್ಕೆ ತರಲು ಬಯಸುತ್ತೇನೆ.ನಮಗೆ ಈ ರೀತಿ ಕಷ್ಟಗಳು ಬರುತ್ತಿದೆ ಇನ್ನ ಸಾಮಾನ್ಯ ಜನರ ಕಷ್ಟಗಳನ್ನು ಕೇಳುವವರು ಯಾರು ಈ ರೀತಿ ತಮ್ಮ ಅಸಮಾಧಾನವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದಾರೆ.

Trending

To Top