gossip

ನಂಬರ್ ಒನ್ ಟಿಆರ್‌ಪಿ ಪಟ್ಟ ಯಾವ ಚಿತ್ರಕ್ಕೆ ಒಲಿದಿದೆ ಗೊತ್ತಾ..?

ದಾಖಲೆಗಳೇ ಹಂಗೆ. ಅವುಗಳನ್ನು ಸೃಷ್ಟಿಸಿದಾಗಲೂ ಚೆಂದ, ಸೃಷ್ಟಿಯಾದ ದಾಖಲೆಗಳನ್ನು ಮುರಿದಾಗಲೂ ಕೇಳೋದೇ ಚೆಂದ. ಒಟ್ಟಿನಲ್ಲಿ ಯಾವುದು ಶಾಶ್ವತವಲ್ಲ. ಆದ್ರೆ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಸದ್ಯದ ಮಟ್ಟಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾನೇ ನಂಬರ್ ಒನ್.

ಈಗ ಹಿರಿತೆರೆಯಂತೆ ಕಿರುತೆರೆಯೂ ನೋಡೋ ಪ್ರೇಕ್ಷಕರಿಗೆ ಹತ್ತಿರವಾಗುವ ಬಲು ದೊಡ್ಡ ಮಾಧ್ಯಮ ಮಾರ್ಗ. ಬೆಳ್ಳಿ ತೆರೆಯಲ್ಲಿಯೂ ಬಂಗಾರದಂಗೆ ಬೆಳೆ ಇದೆ , ಕಿರುತೆರೆಯಲ್ಲಿಯೂ ಬಂಗಾರದಂಗೆ ದುಡ್ಡಿನ ಹೊಳೆ ಇದೆ. ಆದ್ರೆ ಎಲ್ಲದಕ್ಕೂ ಶ್ರೀಸಾಮಾನ್ಯನೇ ಬೇಸು, ಬೇಸ್ಮೆಂಟ್ . ಅಭಿಮಾನಿಗಳಿಂದಲೇ ಟಿ.ಆರ್.ಪಿ , ಆಯಡ್ಗಳ ಎಮ್.ಆರ್.ಪಿ ,ಟಿವಿಆರ್ , ನಂಬರ್-1 ಎಲ್ಲಾ. ಹಿಂದಿನ ಸಿನಿಮಾ ದಾಖಲೆಯನ್ನು ಮುಂದಿನ ಸಿನಿಮಾ ಮುರಿಯುತ್ತೆ. ಈಗ ಕಿರುತೆರೆಯಲ್ಲಿ ಯಾರ ಸಿನಿಮಾ ನಂಬರ್ ಒನ್ ಅನ್ನೋ ಚರ್ಚೆ ಫ್ಯಾನ್ಸ್ ಅಂಗಳದಲ್ಲಿ ಅಲೆದಾಡುತ್ತಿದೆ.

ಯಾರೇನೇ ಅಂದ್ರೂ ಪವರ್ ಸ್ಟಾರ್ ಸಿನಿಮಾನೇ ನಂ.1
ದೊಡ್ಮನೆ ಹುಡ್ಗನ ಹೆಸರಿನಲ್ಲಿದೆ ಕಿರುತೆರೆಯ ಆ ರೆಕಾರ್ಡ್
ಅತಿ ವೇಗವಾಗಿ ತಲುಪಿದ ಕೀರ್ತಿ ಕುರುಕ್ಷೇತ್ರಕ್ಕೆ ಸಲ್ಲಲಿದೆ
No.1 TRP ಪಟ್ಟ ಯಾವ ಚಿತ್ರಕ್ಕೆ ಒಲಿದಿದೆ ಗೊತ್ತಾ..?!
ರೆಕಾರ್ಡ್ಗಳಿರೋದು ಬ್ರೇಕ್ ಮಾಡೋಕ್ಕೆ. ಅದ್ರಲೂ ಸಿನಿಮಾ ರಂಗದಲ್ಲಿ ಹೊಸ ರೆಕಾರ್ಡ್ಗಳು ಹಳೆ ಪಳೆ ದಾಖಲೆಗಳನ್ನು ನುಂಗಿ ನೀರು ಕುಡಿಯುತ್ತಲೇ ಇರ್ತವೆ. ಈ ರೆಕಾರ್ಡ್ನ ವಿಚಾರಗಳು ಕಿರುತೆರೆ ಮಾಧ್ಯಮಗಳಲ್ಲಿಯೂ ಇದೆ. ಮುಂದೆಯೂ ಇರುತ್ತೆ. ಯಾಕೆಂದ್ರೆ ಸ್ಮಾಲ್ ಸ್ಕ್ರೀನ್ನಲ್ಲಿ ಕಾಂಪಿಟೇಷನ್ ಜಾಸ್ತಿ.

ಈ ವಿಷಯಕ್ಕೆ ಬರೋಣ. ಸಹಸ್ರಾರು ಅಭಿಮಾನಿಗಳ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಯಾವುದೇ ವಿಷಯಗಳಿರಲ್ಲಿ ಸೋಷಿಯಲ್ ಮಿಡಿಯಾದಿಂದ ಹಿಡಿದು ಟಿವಿ ಮಿಡಿಯಾದಲ್ಲಿಯೂ ಹೈಪ್ ಆಗುತ್ತವೆ. ದಚ್ಚು ಸಮಾಚಾರವನ್ನು ಸ್ಟಾರ್ ಫ್ಯಾನ್ಸ್ ತಪ್ಪದೆ ನೋಡ್ತಾರೆ. ಅದರಂತೆ ಈಗ ಕುರುಕ್ಷೇತ್ರ ಸಿನಿಮಾವನೂ ಕೂಡ ಮನೆ ಮಂದಿಯಲ್ಲ ಕುಳಿತು ನೋಡಿದ್ದಾರೆ. ಆ ಕಾರಣಕ್ಕೆ ಕುರುಕ್ಷೇತ್ರ ಕಿರುತೆರೆಯಲ್ಲಿ ದಾಖಲೆಯನ್ನು ಸೃಷ್ಟಿಸಿದೆ. ಅತಿ ವೇಗವಾಗಿ ಕಮರ್ಷಿಯಲಿ ನೋಡುಗರಿಗೆ ತಲುಪಿದೆ. ಬಾರ್ಕ್ ಸಂಸ್ಥೆ ನೀಡುವ ಟಿವಿಆರ್ಪಿ ಇಂಪ್ರೆಷನ್ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. 19.5 ಟಿವಿಆರ್ ಅನ್ನು ಗಳಿಸಿಕೊಂಡಿದೆ. ಆದ್ರೆ ಇದೇ ನಂಬರ್ ಓನ್ ದಾಖಲೆಯಾ ಅನ್ನೋ ಪ್ರಶ್ನೆಗೆ ; ನೋ ಅನ್ನು ತ್ತೆ ಜೀ ಟಿವಿ ಕನ್ನಡ ಕುಟುಂಬ.

ಖಂಡಿತವಾಗಿ ಮುನಿರತ್ನ ಕುರುಕ್ಷೇತ್ರ ದಾಖಲೆಯ ಟಿವಿಆರ್ ಅನ್ನು ತನ್ನ ಪಾಲಿಗೆ ಬರೆಸಿಕೊಂಡಿದೆ. ಆದ್ರೆ ಈ ದಾಖಲೆ ನಂಬರ್ ಒನ್ ಅಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ದೊಡ್ಮನೆ ಹುಡ್ಗ ನಂಬರ್ ಒನ್. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಟಿವಿಆರ್ ಗಳಿಸಿದ ಸಿನಿಮಾ ದೊಡ್ಮನೆ ಹುಡ್ಗ. ಜೀ ಕನ್ನಡ ವಾಹಿನಿ ದೊಡ್ಮನೆ ಹುಡ್ಗ ಚಿತ್ರ ಪ್ರಸಾರ ಮಾಡಿದಾಗ ಬರೋಬ್ಬರಿ 21 ಟಿವಿಆರ್ ರೇಟಿಂಗ್ ತನ್ನದಾಗಿಸಿಕೊಂಡಿತ್ತು. ಇದೇ ಕನ್ನಡ ಟೆಲಿವಿಷನಲ್ಲಿ ಇತಿಹಾಸದಲ್ಲಿ ಅತೀ ಹೆಚ್ಚು ಟಿ.ಆರ್.ಪಿ ಅಥವಾ ಟಿವಿಆರ್ ಗಳಿಸಿದ ಸಿನಿಮಾ.

‘ದೊಡ್ಮನೆ ಹುಡ್ಗ’ ಸಿನಿಮಾದ ನಂತರ ‘ಮುನಿರತ್ನ ಕುರುಕ್ಷೇತ್ರ’ , ‘ನಟಸಾರ್ವಭೌಮ’ , ‘ರಾಜಕುಮಾರ’ , ‘ಕೆಜಿಎಫ್ ಚಾಪ್ಟರ್ -1’, ‘ಹೆಬ್ಬುಲಿ’ ಸಿನಿಮಾಗಳು ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳಾಗಿವೆ. ದಾಖಲೆಗಳು ಇರೋದೆ ಮುರಿಯೋಕೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಸಿನಿಮಾಗಳು ಇನಷ್ಟು ದಾಖಲೆಗಳನ್ನು ಮಾಡಿದ್ರು ಅಚ್ಚರಿ ಪಡಬೇಕಿಲ್ಲ. ಕೊನೆಯದಾಗಿ ಒಂದು ಮಾತು. ಕನ್ನಡ ಸಿನಿಮಾ ಮತ್ತು ಮಾಧ್ಯಮಗಳನ್ನು ಉಳಿಸಿ ಬೆಳೆಸೋ ಶಕ್ತಿ ಇರೋದು ಕನ್ನಡಿಗರಿಗೆ ಮಾತ್ರ. ಕನ್ನಡ ಸಿನಿಮಾಗಳನ್ನು ಥಿಯೇಟರ್ನಲ್ಲಿಯೇ ನೋಡುತ್ತಾ, ಕನ್ನಡ ಮಾಧ್ಯಮಗಳನ್ನ ನೋಡಿ ಉಳಿಸಿ ಬೆಳಸಿ. ಸ್ಟಾರ್ ಫ್ಯಾನ್ಸ್ ಮಧ್ಯೆ ಸ್ನೇಹ ಸಂಬಂಧ ಒಳಿತು.

Trending

To Top