Tv Shows

17 ಕೋಟಿ ವೀಕ್ಷಣೆಗಳೊಂದಿಗೆ ಧಾಖಲೆ ಬರೆದಿದೆ ಮರುಪ್ರಸಾರಗೊಳ್ಳುತ್ತಿರುವ ‘ರಾಮಾಯಣ’

ಕೊರೋನಾದಿಂದಾಗಿ ಭಾರತ ಲಾಕ್ಡೌನ್ ಮಾಡಿದ ಬಳಿಕ ಡಿಡಿಯಲ್ಲಿ ರಾಮಾಯಣವನ್ನು ಮರುಪ್ರಸಾರ ಮಾಡಲಾಗಿತ್ತು. ಇದೀಗ ಈ ಸೀರಿಯಲ್ಗೆ ಮತ್ತೆ ಯಶಸ್ಸು ಸಿಕ್ಕಿದೆ ಅನ್ನೋದು ಬಾರ್ಕ್ ಮೂಲಕ ಗೊತ್ತಾಗಿದೆ. ಬಾರ್ಕ್ ಪ್ರಕಾರ ಕಳೆದ ವೀಕೆಂಡ್ನಲ್ಲಿ ಶುರುವಾದ ರಾಮಾಯಣದ 4 ಶೋಗಳನ್ನು ಸುಮಾರು 17 ಕೋಟಿ ಜನ ವೀಕ್ಷಿಸಿದ್ದಾರೆ.

ಕಳೆದ ಶನಿವಾರದಂದು ಬೆಳಗ್ಗೆ ಪ್ರಸಾರವಾದ ಈ ಸೀರಿಯಲ್ನ್ನು 3.4 ಕೋಟಿ ಜನ ನೋಡಿದ್ದರು. ಅದೇ ದಿನ ರಾತ್ರಿ ಪ್ರಸಾರವಾದ ಶೋವನ್ನು 4.5 ಕೋಟಿ ಜನ ವೀಕ್ಷಿಸಿದ್ದಾರೆ. ಮರುದಿನ ಈ ಸಂಖ್ಯೆಯಲ್ಲಿ ಮತ್ತಷ್ಟು ಜಾಸ್ತಿಯಾಗಿದೆ ಅಂತ ಬಾರ್ಕ್ ಮಾಹಿತಿ ನೀಡಿದೆ. ರಮಾನಂದ ಸಾಗರ್ ನಿರ್ಮಾಣದಲ್ಲಿ ಮೂಡಿ ಬಂದ ರಾಮಾಯಣ ಧಾರವಾಹಿ ಜೆನರಲ್ ಎಂಟರ್ಟೈನ್ಮೆಂಟ್ ಕೆಟಗರಿಯಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಧಾರವಾಹಿಯಾಗಿದೆ.

Trending

To Top