ರಾಜ್ಯದ ಯಾವುದೇ ಜಿಲ್ಲೆಯಲ್ಲಿದ್ದರೂ, ಕೊರೊನಾ ಸೋಂಕಿತರಿಗೆ ಇನ್ಮುಂದೆ ದೂರಸಂಪರ್ಕ ವ್ಯವಸ್ಥೆಯಡಿ ಉನ್ನತ ಚಿಕಿತ್ಸೆ ಸಿಗಲಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಟೆಲಿ-ಐಸಿಯು ಎಂಬ ವಿನೂತನ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಟೆಲಿ-ಐಸಿಯು ಘಟಕಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುಧಾಕರ್, ರಾಜ್ಯದ ಎಲ್ಲೆಡೆ ಕೊರೋನಾ ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಟೆಲಿ-ಐಸಿಯು ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ, ಇಂತಹ ಘಟಕದ ಮೂಲಕ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಜ್ಞ ವೈದ್ಯರು ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಪೂರ್ಣ ಗುಣಮುಖರಾಗುವವರೆಗೆ ನಿಗಾ ವಹಿಸುತ್ತಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಟೆಲಿ-ಐಸಿಯು ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿಯುಳ್ಳ ವಿಡಿಯೋ ಲಿಂಕ್ ಅನ್ನು ಸಚಿವರು ಹಂಚಿಕೊಂಡಿದ್ದಾರೆ.
ರಾಜ್ಯದ ಎಲ್ಲೆಡೆ ಕೊರೋನಾ ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಟೆಲಿ-ಐಸಿಯು ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ, ಇಂತಹ ಘಟಕದ ಮೂಲಕ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಜ್ಞ ವೈದ್ಯರು ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಪೂರ್ಣ ಗುಣಮುಖರಾಗುವವರೆಗೆ ನಿಗಾ ವಹಿಸುತ್ತಾರೆ. @BSYBJPhttps://t.co/Jtdfgqz6BR
— Dr Sudhakar K (@mla_sudhakar) April 15, 2020
ರಾಜ್ಯದ ಎಲ್ಲಾ ಕೋವಿಡ್-19 ನಿಗದಿತ ಆಸ್ಪತ್ರೆಗಳೊಂದಿಗೆ ಈ ಟೆಲಿ ಐಸಿಯು ಘಟಕ ಸಂಪರ್ಕದಲ್ಲಿರುತ್ತದೆ. ರಾಜ್ಯದ ಯಾವುದೇ ಮೂಲೆಯಲ್ಲೂ ಸೋಂಕಿತರ ಚಿಕಿತ್ಸೆ ವಿಧಿ ವಿಧಾನದ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ಕಲೆ ಹಾಕಬಹುದು. ಬಳಿಕ ಇಲ್ಲಿಂದಲೇ ಯಾವ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಈ ಘಟಕ ಮಾರ್ಗದರ್ಶನ ಮಾಡಲಿದೆ. ಕಾರ್ಡಿಯಾಲಜಿಸ್ಟ್, ಪರಿಣಿತ ವೈದ್ಯರು ಸೇರಿದಂತೆ 6 ವಿಭಾಗಗಳಿಗೆ ಸಂಬಂಧಿಸಿದವರು, ದಿನದ 4 ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.
ಕೊರೋನಾ ಸೋಂಕಿತರಿಗೆ ಎಲ್ಲೆಡೆ ಅತ್ಯುತ್ತಮ ಚಿಕಿತ್ಸೆ ನೀಡುವ ಟೆಲಿ-ಐಸಿಯು ಘಟಕವನ್ನು ಇಂದು ಉದ್ಘಾಟಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ, ತಜ್ಞರನ್ನು ಹೊಂದಿರುವ ಈ ಘಟಕ, ರಾಜ್ಯದಲ್ಲಿ #COVID19 ಶೂನ್ಯ ಮರಣಪ್ರಮಾಣ ಸಾಧಿಸಲು ಮತ್ತು ಉತ್ತಮ ಚಿಕಿತ್ಸೆ ನೀಡಿ ಪೂರ್ಣಗುಣಮುಖರಾಗುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ pic.twitter.com/Dd3cUsdaPp
— Dr Sudhakar K (@mla_sudhakar) April 14, 2020
ಉದಾಹರಣೆಗೆ ಯಾವುದೇ ಜಿಲ್ಲೆಯ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಕ್ಷಣದಿಂದ ಆ ಸೋಂಕಿತ, ಡಿಸ್ಚಾರ್ಜ್ ಆಗುವ ತನಕ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ನೋಟ್ ಮಾಡಿ ಕಳುಹಿಸಲಾಗುತ್ತೆ. ಟೆಲಿ ಐಸಿಯು ಘಟಕದ ಮಾಹಿತಿ ಆಧರಿಸಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡುತ್ತಾರೆ ಎಂದು ವಿಡಿಯೋದಲ್ಲಿ ಸುಧಾಕರ್ ವಿವರಣೆ ನೀಡಿದ್ದಾರೆ.
