ದೇವಸ್ಥಾನಗಳ ಪದ್ಧತಿ ಬಗ್ಗೆ ಮಾತನಾಡಿದ್ದಕ್ಕಾಗಿ ನಟಿ ಜ್ಯೋತಿಕಾ ಸುತ್ತ ಹೊಸ ವಿವಾದ !

ತಮಿಳು ನಟ ಸೂರ್ಯ ಮತ್ತು ಅವರ ಪತ್ನಿ ನಟಿ ಜ್ಯೋತಿಕಾ ಸಿನಿಮಾ ಜೊತೆಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತರೆ. ಕಾಲಿವುಡ್‌ನ ಮಾದರಿ ದಂಪತಿಗಳಾಗಿ ಇವರು ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ನಟಿ ಜ್ಯೋತಿಕಾ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅವಾರ್ಡ್‌ ಫಂಕ್ಷನ್‌ವೊಂದರಲ್ಲಿ ಇವರು ಮಾತನಾಡಿದ ಬೋಲ್ಡ್‌ ಹೇಳಿಕೆಯೊಂದು ಈಗ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಹಿಂದೂ ಸಂಪ್ರದಾಯಗಳ ಬಗ್ಗೆ ಜ್ಯೋತಿಕಾ ಮಾತನಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಜ್ಯೋತಿಕಾ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧಗಳು ಆರಂಭವಾಗಿವೆ. ಜ್ಯೋತಿಕಾ ಕ್ಷಮೆ ಕೇಳಬೇಕು ಎಂದು ಕೂಡ ಹಲವರು ಹೇಳುತ್ತಿದ್ದಾರೆ.

ದೇವಸ್ಥಾನಗಳಿಗೆ ಹಣ ಹಾಕುವ ಹಾಗೆ ಶಾಲೆ-ಆಸ್ಪತ್ರೆಗಳಿಗೆ ಹಣ ನೀಡಿ ಎಂದಿದ್ದರು ಜ್ಯೋತಿಕಾ. ಈ ವಿಡಿಯೋವೊಂದನ್ನು ಅಭಿಮಾನಿಯೋರ್ವರು ಶೇರ್ ಮಾಡಿದ್ದರು. ಈಗ ಜ್ಯೋತಿಕಾ ಮಾತನಾಡಿದ್ದು ಸರಿ ಎಂದು ಹಲವರು ಬೆಂಬಲ ನೀಡುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಜ್ಯೋತಿಕಾ ತಮಿಳುನಾಡಿನ ತಂಜಾವೂರಿಗೆ ರಾಕ್ಷಸಿ ಸಿನಿಮಾ (Raatchasi) ಶೂಟಿಂಗ್‌ಗೋಸ್ಕರ ಹೋಗಿದ್ದರಂತೆ. ಆಗ ಅವರು ಅಲ್ಲಿನ ಸುಂದರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅರಮನೆಯಂತಿದ್ದ ಆ ದೇವಸ್ಥಾನದ ವೈಭೋಗ, ಸೌಂದರ್ಯ ನೋಡಿದ ಜ್ಯೋತಿಕಾ ನಿಜಕ್ಕೂ ಮೂಕವಿಸ್ಮಿತರಾಗಿದ್ದರು. ಆದರೆ ಅದೇ ದಿನ ಚಿತ್ರೀಕರಣಕ್ಕೋಸ್ಕರ ಅಲ್ಲಿನ ಆಸ್ಪತ್ರೆಯೊಂದಕ್ಕೆ ಹೋಗಿದ್ದ ಜ್ಯೋತಿಕಾಗೆ ಮಾತ್ರ ನಿಜಕ್ಕೂ ಶಾಕ್ ಕಾದಿತ್ತು. ಆ ಆಸ್ಪತ್ರೆಯ ವ್ಯವಸ್ಥೆ ಸರಿ ಇರಲಿಲ್ಲ, ಸ್ವಚ್ಛತೆಯಂತೂ ಮೊದಲೇ ಇಲ್ಲವಂತೆ. ಹೀಗಾಗಿ ದೇವಸ್ಥಾನಗಳಿಗೆ ದೇಣಿಗೆ ನೀಡುವಂತೆ ಆಸ್ಪತ್ರೆಗಳಿಗೂ ಹಣ ಸಹಾಯ ಮಾಡಿ. ಮನುಷ್ಯರು ಜೀವ ಉಳಿಸಿಕೊಳ್ಳಲು ಆಸ್ಪತ್ರೆಗಳು ತುಂಬ ಸಹಾಯಕ ಎಂದಿದ್ದಾರೆ ಜ್ಯೋತಿಕಾ.

ಜ್ಯೋತಿಕಾ ನೀಡಿರುವ ಹೇಳಿಕೆ ನಿಜಕ್ಕೂ ಶಾಕ್ ಉಂಟು ಮಾಡಿದೆ ಎಂದು ಕೆಲವರು ಹೇಳಿದ್ದಾರೆ. ತಮಿಳು ಸಂಪ್ರದಾಯ, ಆಚಾರ-ವಿಚಾರದ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ, ಮೊದಲು ಅದನ್ನು ಅವರು ಕಲಿಯಲಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

Previous articleಡಿಬಾಸ್ ಮತ್ತು ರಾಕಿ ಭಾಯ್ ಮಾತನಾಡಿರುವ ಹಳೆಯ ಆಡಿಯೋ ಒಂದು ಸಖತ್ ವೈರಲ್ ಆಗಿದೆ!
Next articleGood News : ಮತ್ತಷ್ಟು ಸಡಿಲವಾಯ್ತು ಲಾಕ್ ಡೌನ್ ; ಇನ್ನಷ್ಟು ಚಟುವಟಿಕೆಗೆ ಸಿಕ್ತು ಗ್ರೀನ್ ಸಿಗ್ನಲ್ !