Film News

“ದಿ ಸ್ಟೋರಿ ಆಫ್ ರಾಯಗಢ” : ಗೋಲ್ಡನ್ ಸ್ಟಾರ್ ನಟಿಸಿ ಸಿಂಪಲ್ ಸುನಿ ನಿರ್ದೇಶಿಸಲಿರುವ ಹೊಸ ಚಿತ್ರ

ಸ್ಯಾಂಡಲ್ ವುಡ್ ನ ನಿರ್ದೇಶಕ ಸಿಂಪಲ್ ಸುನಿ ಈ ಹಿಂದೆ ಗಣೇಶ್ ಅವರ ನಾಯಕತ್ವದಲ್ಲಿ ರೊಮ್ಯಾಂಟಿಕ್ ಕಾಮಿಡಿ ‘ಚಮಕ್’ ಸಿನಿಮಾ ನಿರ್ದೇಶಿಸಿದ್ದರು.

ಈಗ ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ಅವತಾರ್ ಪುರುಷ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಲ್ಲಿ ‘ಸಖತ್’ ಚಿತ್ರ ನಿರ್ದೇಶಿಸುತ್ತಿದ್ದಾರೆ ಇದರ ನಡುವೆಯೇ ಗಣೇಶ್ ಮತ್ತು ಸುನಿ ಕ ಹೊಸದೊಂದು ಸಿನಿಮಾಗೆ ಕೈಜೋಡಿಸಿದ್ದಾರೆ.

ಹೊಸ ಚಿತ್ರದ ಹೆಸರು ‘ದಿ ಸ್ಟೋರಿ ಆಫ್ ರಾಯಗಢ’ . ಸಿಂಪಲ್ ಸುನಿ ಮತ್ತು ಗಣೇಶ್ ಇಬ್ಬರೂ ಸಹ ಲವ್ ಸ್ಟೋರಿ ಸಿನಿಮಗಳನ್ನೇ ಮಾಡಿದವರು. ರಾಯಗಢದ ಮೂಲಕ ಬೇರೆಯದೇ ಜಾನರ್ ಟ್ರೈ ಮಾಡಲಿದ್ದಾರೆ.

‘ಸ್ಟೋರಿ ಆಫ್ ರಾಯಗಢ’ ಚಿತ್ರದ ಕಥೆ ನೈಜ ಘಟನೆಯೊಂದನ್ನು ಹಿನ್ನಲೆಯಾಗಿಟ್ಟುಕೊಂಡು ತಯಾರಾಗಿದೆ. ಹಿಂದೆಂದೂ ಕಂಡಿರದ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೋಲ್ಡನ್ ಸ್ಟಾರ್. ಇದೊಂದು ಬ್ಲ್ಯಾಕ್ ಕಾಮಿಡಿ ಚಿತ್ರ ಆಗಿರಲಿದೆ.

ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆ ಇದಾಗಿದ್ದು, ಸಂಭಾಷಣೆ ಅಲ್ಲಿನ ಶೈಲಿಯಲ್ಲಿ ಇರಲಿದೆ ಎಂದು ಡೈರೆಕ್ಟರ್ ಹೇಳಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾತ್ರ, ಡೈಲಾಗ್ ಡೆಲಿವರಿ ಎಲ್ಲವೂ ವಿಭಿನ್ನವಾಗಿರಲಿದೆಯಂತೆ. ಈ ಪಾತ್ರಕ್ಕಾಗಿ ತಮ್ಮ ಮ್ಯಾನರಿಸಮ್ ಅನ್ನು ಬದಲಿಸಿಕೊಳ್ಳಲಿದ್ದಾರಂತೆ ಗಣೇಶ್.

ಈ ಚಿತ್ರದ ಶೂಟಿಂಗ್ 2 ವರ್ಷದ ಬಳಿಕ ಆರಂಭವಾಗಲಿದೆ. ಸಧ್ಯಕ್ಕೆ ಅವತಾರ್ ಪುರುಷದಲ್ಲಿ ಬ್ಯುಸಿ ಇರುವ ಸುನಿ, ಇದರ ಜೊತೆಗೆ ಸಖತ್ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅನಂತರ ರಾಯಗಢದ ಕಥೆ ಆರಂಭವಾಗಲಿದೆ.

https://twitter.com/SimpleSuni/statu

Trending

To Top