Film News

‘ದಿಯಾ’, ‘ಲವ್ ಮಾಕ್ಟೇಲ್’ ನಂತರ ಟ್ರೆಂಡ್ ಆಗ್ತಿದೆ ಮತ್ತೊಂದು ಕನ್ನಡ ಚಿತ್ರ !

‘ದಿಯಾ’, ‘ಲವ್ ಮಾಕ್ಟೇಲ್’ ನಂತರ ಮತ್ತೊಂದು ಕನ್ನಡ ಅತ್ಯುತ್ತಮ ‘ಬೀರಬಲ್’ ಚಿತ್ರ ಅಮಾಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗಿದೆ. ಅತಿ ಹೆಚ್ವಿನ ಮೊತ್ತಕ್ಕೆ ಅಮೇಜಾನ್ ಪ್ರೈಂ ‘ಬೀರಬಲ್’ ಚಿತ್ರವನ್ನು ಖರೀದಿಸಿದೆ.

ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್ ನಿರ್ಮಿಸಿ ಎಂ ಜಿ ಶ್ರೀನಿವಾಸ್ ನಿರ್ದೇಶಿಸಿ, ಅಭಿನಯಿಸಿದ್ದಾರೆ. ಚಿತ್ರಕ್ಕೆ ಸೌರವ್ – ವೈಭವ್ ಅವರ ಸಂಗೀತ ನಿರ್ದೇಶನವಿದೆ. ಭರತ್ ಪರಶುರಾಮ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಶ್ರಾಫ್ ಸಂಕಲನವಿದೆ.

‘ಬೀರಬಲ್’ ಮುಖ್ಯ ಪಾತ್ರಗಳಲ್ಲಿ ಶ್ರೀನಿ, ರುಕ್ಮಿಣಿ ವಸಂತ್, ಸುಜಯ್ ಶಾಸ್ತ್ರೀ, ವಿನೀತ್, ಸುರೇಶ್ ಹೆಬ್ಳೀಕರ್, ಕವಿತಾ ಗೌಡ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರವು ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು, ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಸಿನಿಮಾ ಎಂದು ಗುರುತಿಸಲಾಗಿದೆ.

Trending

To Top