ಖುಷಿ , ಪೃಥ್ವಿ ಅಂಬರ್ , ದೀಕ್ಷಿತ್ ಅಭಿನಯಿಸಿ ಕೆಎಸ್ ಅಶೋಕ್ ನಿರ್ದೇಶನದ ದಿಯಾ ಚಿತ್ರ ಈಗ ಆನ್ ಕೈನ್ ನಲ್ಲಿ ಬಹಳ ಒಳ್ಳೆ ಪ್ರದರ್ಶನ ಕಂಡು ಎಲ್ಲೆಡೆ ತುಂಬಾ ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದೆ. ಇದೇ ವೇಳೆ ದಿಯಾ ರಿಮೇಕ್ ರೈಟ್ಸ್ ಗೂ ಕೂಡ ಬಹಳ ಬೇಡಿಕೆ ಬಂದಿದೆ.
ಹಲವು ಭಾಷೆಗಳಲ್ಲಿ ಸಿನಿಮಾ ಮಾಡಲು ಸುಮಾರು 60 ಮಂದಿ ನನಗೆ ಕರೆ ಮಾಡಿದ್ದರು ಎಂದು ನಿರ್ಮಾಪಕ ಕೃಷ್ಣ ಚೈತನ್ಯ ತಿಳಿಸಿದ್ದಾರೆ.
ಹಲವರು ಕರೆ ಮಾಡಿ ರಿಮೇಕ್ ರೈಟ್ಸ್ ಕೇಳಿದ್ದಾರೆ, ಆದರೆ ಇನ್ನೂ ಯಾವುದೂ ಫೈನಲ್ ಆಗಿಲ್ಲ, ಕುಳಿತು ಮಾತುಕತೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ ನಿರ್ಮಾಪಕರು.
ತೆಲುಗು ಭಾಷೆಯ ನಿರ್ಮಾಪಕರು ಹಾಗೂ ಯುಎಸ್ ನಲ್ಲಿರುವ ನಿರ್ಮಾಪಕರೊಬ್ಬರು ಕರೆ ಮಾಡಿ ತೆಲುಗು ವರ್ಷನ್ ದಿಯಾ ಸಿನಿಮಾವನ್ನು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ರೈಟ್ಸ್ ಕೇಳಿದ್ದಾರೆ. ಆದರೆ ಯಾವುದು ಫೈನಲ್ ಆಗಿಲ್ಲ.
