Connect with us

Film News

ದಿಯಾ ಖ್ಯಾತಿಯ ಖುಷಿ ರವಿ ಅವರ ಮುಂದಿನ ಸಿನಿಮಾ ಯಾವುದು? ಅವರ ಪಾತ್ರವೇನು ಗೊತ್ತಾ?

Published

on

ದಿಯಾ ಚಿತ್ರದ ನಾಯಕಿ ಖುಷಿಯ ಯಶಸ್ಸಿನ ‘ನಕ್ಷೆ’ ಬದಲಾಗಿದೆ. ಈ ವರ್ಷದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ‘ದಿಯಾ’. ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲದೆ ಇರಬಹುದು. ಆದರೆ, ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ವ್ಯಕ್ತವಾಗಿದೆ. ‘ದಿಯಾ’ ಚಿತ್ರದ ನಾಯಕಿ ಖುಷಿ ಹಾಗೂ ಪೃಥ್ವಿ ಅಂಬರ್ ಈಗ ಕೆಲ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ದಿಯಾ ಚಿತ್ರದ ವಿರಹ ನಾಯಕಿ ಖುಷಿ ಪಾತ್ರದ ಉದ್ದಕ್ಕೂ ಖುಷಿ ಅನುಭವಿಸುವುದೇ ಇಲ್ಲ.

ಇದನ್ನ ಬಿಗಿಯಾಗಿ ಚಿತ್ರದ ದ್ವಿತೀಯ ಭಾಗದಲ್ಲಿ ನಿರ್ದೇಶಕ ಅಶೋಕ್ ಹೇಳಿದ್ದಾರೆ. ನಾಯಕಿ ಖುಷಿ ಚಿಕ್ಕ ವಯಸ್ಸಿನಿಂದಲೂ ಸಂಗೀತ, ನೃತ್ಯ, ಕಿರು ಚಿತ್ರದಲ್ಲಿ ತೊಡಗಿಸಿಕೊಂಡವರು. ದೆಹಲಿಯ ರಾಜ್‌ಪಥ್‌ನಲ್ಲೂ ಸಹ ಭಾಗವಹಿಸಿದವರು. 2012 ರಲ್ಲಿ ಗಾಯಕಿಯಾಗಿ ರಂಗಭೂಮಿ ಪ್ರವೇಶ ಮಾಡಿದರು.

ಖುಷಿ ಈಗ ‘ನಕ್ಷೆ’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ಖುಷಿ ಅವರದ್ದು ಪತ್ರಕರ್ತೆ ಪಾತ್ರ.

ಇದು ಸಹ ಮಹಿಳಾ ಪ್ರಧಾನ ಸಿನಿಮಾ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಹೊಂದಿದೆ. ಪ್ರಮೋದ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಸಹ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ‘ನಕ್ಷೆ’ ಮಧು ಅವರ ಚೊಚ್ಚಲ ಸಿನಿಮಾ ನಿರ್ದೇಶನ. ಮೊದಲ ಸಿನಿಮಾದಲ್ಲಿ ನಿರ್ದೇಶಕರು ಅತ್ಯುತ್ತಮ ಸಿನಿಮಾ ಕಟ್ಟಿ ಕೊಡುವ ಕಾತರದಲ್ಲಿದ್ದಾರೆ.

Film News

ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿಕೊಂಡ ಟಾಲಿವುಡ್ ನಟ ಅಲ್ಲು ಸಿರಿಶ್ ಡಾರ್ಲಿಂಗ್ ಕೃಷ್ಣ ಅವರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ

Published

on

ಡಾರ್ಲಿಂಗ್ ಕೃಷ್ಣ ರಚಿಸಿ, ನಿರ್ದೇಶಿಸಿ, ನಟಿಸಿದ ಲವ್ ಮಾಕ್ಟೇಲ್ ಚಿತ್ರ ಇಡೀ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಂಡು. ನಮ್ಮ ರಾಜ್ಯದವರನ್ನು ಮಾತ್ರವಲ್ಲದೆ ಹೊರರಾಜ್ಯದವರನ್ನು ಮತ್ತು ಹೊರದೇಶದವರಿಂದ ಸಹ ಮೆಚ್ಚುಗೆ ಪಡೆಯಿತು..

ನಮ್ಮ ಸ್ಯಾಂಡಲ್ ವುಡ್ ನ ಹಲವಾರು ನಟರು ಈ ಚಿತ್ರಕ್ಕೆ ಪ್ರೋತ್ಸಾಹ ನೀಡಿದರು. ಸಿನಿಅಭಿಮನಿಗಳಂತೂ ಆದಿ ನಿಧಿಮ ಎಂದು ಕೃಷ್ಣ ಮತ್ತು ಮಿಲನ ಅವರ ನಟನೆಗೆ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟ್ ಗಳು ಲವ್ ಮಾಕ್ಟೇಲ್ ಬಗ್ಗೆ ಬರುತ್ತಲೇ ಇರುತ್ತವೆ. ಚಿತ್ರದ್ಲಲಿನ ಕಾಮಿಡಿ, ಲವ್ ಮತ್ತು ಟ್ರಾಜಿಡಿ ಕ್ಲೈಮ್ಯಾಕ್ಸ್ ಎಲ್ಲರನ್ನೂ ಆಕರ್ಷಿಸಿದೆ.

ಇದೀಗ ಟಾಲಿವುಡ್ ನ ನಟರಾದ ಅಲ್ಲು ಸಿರಿಶ್ ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿ , ಟ್ವೀಟ್ ಮಾಡಿದ್ದಾರೆ.. ಲವ್ ಮಾಕ್ಟೇಲ್ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ ಬಹಳ ಇಷ್ಟವಾಯಿತು, ನನ್ನನ್ನು ಹಳೆಯ ದಿನಗಳಿಗೆ ಕರೆದುಕೊಂಡು ಹೋಯಿತು ಎಂದು ಬರೆದಿದ್ದಾರೆ..

ಜೊತೆಗೆ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದು ಕನ್ನಡದಲ್ಲಿ ಹೇಳಿದ್ದಾರೆ ..

Continue Reading

Film News

ಕನ್ನಡದಲ್ಲಿ ಧನ್ಯವಾದ ಹೇಳಿ ಕನ್ನಡಿಗರ ಹೃದಯ ಗೆದ್ದ ಸ್ಟಾರ್ ನಿರ್ದೇಶಕ ರಾಜಮೌಳಿ!

Published

on

ನಿರ್ದೇಶಕ ರಾಜಮೌಳಿ ಮೂಲತಃ ಕನ್ನಡಿಗರು .. ರಾಯಚೂರಿನ ಮಾನ್ವಿ ಇವರ ಹುಟ್ಟೂರು ಹಾಗಾಗಿ ಇವರು ಬಹಳ ಚೆನ್ನಾಗಿ ಕನ್ನಡ ಮಾತನಾಡಬಲ್ಲರು . ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕನ್ನಡದಲ್ಲಿಯೇ ಒಂದು ಪೋಸ್ಟ್ ಹಾಕಿ ಕನ್ನಡಿಗರ ಹೃದಯ ಗೆದ್ದಿದ್ದಾರೆ ರಾಜಮೌಳಿ..


ನಟ ರಾಮ್‌ ಚರಣ್‌ ಜನ್ಮದಿನದ ಸಲುವಾಗಿ ಅವರ ‘ಆರ್‌ಆರ್‌ಆರ್‌’ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಅದರಲ್ಲಿ ರಾಮ್ ಚರಣ್ ಕೊಮರಂ ಭೀಮ್‌ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಅದಕ್ಕಾಗಿ ಆ ಪಾತ್ರ ಯಾವ ರೀತಿ ಇರಲಿದೆ ಎಂಬ ಬಗ್ಗೆ ಸಣ್ಣ ಪರಿಚಯವನ್ನು ಈ ಟೀಸರ್‌ನಲ್ಲಿ ನೀಡಲಾಗಿದೆ. ಈ ಸಿನಿಮಾ ಕನ್ನಡ, ತೆಲುಗು, ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂಬ ಸತ್ಯ ಈ ಹಿಂದೆಯೇ ಗೊತ್ತಾಗಿತ್ತು. ಅಂತೆಯೇ ರಾಮ್‌ ಚರಣ್ ಬರ್ತ್‌ ಡೇ ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ನಟ ಜೂ. ಎನ್‌ಟಿಆರ್ ಕನ್ನಡದಲ್ಲೇ ಆ ಟೀಸರ್‌ಗೆ ಧ್ವನಿ ನೀಡಿದ್ದು ಇನ್ನೊಂದು ವಿಶೇಷವಾಗಿತ್ತು. ಅವರ ಧ್ವನಿಯಲ್ಲಿ ಕನ್ನಡ ಭಾಷೆ ಕೇಳಿದ ಕನ್ನಡಿಗರು ಖುಷಿಯಾಗಿದ್ದರು.

ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬುಹೃದಯದ ಧನ್ಯವಾದಗಳು…:) #RRR

Opublikowany przez SS Rajamouliego Niedziela, 29 marca 2020

ರಾಮ್‌ ಚರಣ್ ಅವರ ‘ಕೊಮರಂ ಭೀಮ್ ಟೀಸರ್’ ಭರ್ಜರಿ ಹಿಟ್ ಆಗಿದ್ದರಿಂದ ರಾಜಮೌಳಿ ಖುಷಿ ಆಗಿದ್ದಾರೆ. ಕನ್ನಡ ವರ್ಷನ್‌ ಟೀಸರ್ ಅನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಿರ್ದೇಶಕ ರಾಜಮೌಳಿ, ‘ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬುಹೃದಯದ ಧನ್ಯವಾದಗಳು…’ ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ. ಇದನ್ನು ಕಂಡ ಕನ್ನಡಿಗರು ಖುಷಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ, ಎಲ್ಲ ಭಾಷೆಯ ಸಿನಿಪ್ರಿಯರಿಗೆ ಅವರು ಶುಭ ಕೋರಿದ್ದಾರೆ. ‘ಈಗ’ ಖ್ಯಾತಿಯ ನಿರ್ಮಾಪಕ ಹಾಗೂ ರಾಜಮೌಳಿಯ ಆಪ್ತ ಸಾಯಿ ಕೊರ್ರಪಟಿ ‘ಆರ್‌ಆರ್‌ಆರ್‌’ ಕನ್ನಡ ವರ್ಷನ್‌ ಅನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲಿದ್ದಾರೆ.

Continue Reading

Film News

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೇಲಿದೆ ಭಾರಿ ಒತ್ತಡ : ಮನದ ಮಾತು ಹೇಳಿದ್ದಾರೆ ಅರ್ಜುನ್ ಜನ್ಯ

Published

on

ಲಾಕ್ ಡೌನ್ ಇಂದಾಗಿ ಹಲವಾರು ಜನರು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ, ಇನ್ನು ಕೆಲವರು ಮನೆಯಲ್ಲಿ ಕುಳಿತು ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ಹಲವಾರು ಜನರು ಹೇಗಪ್ಪಾ ಕಾಲ ಕಳೆಯೋದು ಎಂದು ಯೋಚಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಶೂಟಿಂಗ್ ಇಲ್ಲದೆ ತಮ್ಮ ದಿನಗಳನ್ನು ಕ್ರಿಯೇಟಿವ್ ಆಗಿ ಏನಾದರೊಂದು ಕೆಲಸ ಮಾಡಿ ಕಾಲ ಕಳೆಯುತ್ತಿದ್ದಾರೆ..

ಆದರೆ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರು ಸುಮ್ಮನೆ ಕುಳಿತಿಲ್ಲ.. ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದರು ಅರ್ಜುನ್ ಜನ್ಯ ಈಗ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಲಾಕ್ ಡೌನ್ ಆಗಿರುವುದು ಅವರಿಗೆ ಒಳ್ಳೆಯದಾಗಿದೆ ಎಂದಿದ್ದಾರೆ..

ಹೇಗೆ ಎಂದರೆ.. ಬೇರೆ ಸಮಯದಲ್ಲಿ ಅವರಿಗೆ ಮ್ಯೂಸಿಕ್ ಕಂಪೋಸ್ ಮಾಡಲು ಸಾಕಷ್ಟು ಸಮಯ ಸಿಗುವುದಿಲ್ಲ. ಎಷ್ಟೋ ಸಾರಿ ಆಡಿಯೋ ರಿಲೀಸ್ ಗೂ 15 ದಿನ ಮುಂಚಿತವಾಗಿ ಕೆಲಸ ಮುಗಿಸಲು ಕಷ್ಟವಾಗುತ್ತದೆ.. ಈಗ ಇವರ ಕೈಯಲ್ಲಿ ಸಿಕ್ಕಾಪಟ್ಟೆ ಪ್ರಾಜೆಕ್ಟ್‌ಗಳಿವೆ. ಇವರ ಬೆಂಗಳೂರಿನ ಮನೆಗೂ-ಸ್ಟುಡಿಯೋಕ್ಕೂ ಹೆಚ್ಚಿನ ದೂರ ಇಲ್ಲ. ಹೀಗಾಗಿ ಅವರು ಸಂಗೀತದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಂಗೀತ ನನ್ನನ್ನು ಬ್ಯುಸಿಯಾಗಿರಿಸಿದೆ, ಎನ್ನುತ್ತಾರೆ ಅರ್ಜುನ್ ಜನ್ಯ. ಸಿನಿಮಾ ತಂಡ ಹಾಡು ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತದೆಯೋ, ಆಗ ಒಮ್ಮೊಮ್ಮೆ ನನಗೆ ತುಂಬ ಪ್ರೆಶರ್ ಆಗುತ್ತದೆ, ತಡರಾತ್ರಿವರೆಗೂ ಕೆಲಸ ಮಾಡಬೇಕಾಗಿ ಬರೋದುಂಟು. ರಿಲೀಸ್‌ ಡೇಟ್ ಟಾರ್ಗೆಟ್ ರೀಚ್ ಆಗೋದಿಕ್ಕೆ ಕೇವಲ 15 ದಿನ ಸಿಗುತ್ತದೆ ಅಷ್ಟೇ. ಆದರೆ ಈಗ ಹಾಗಿಲ್ಲ. ಈಗ ಯಾವುದೇ ಒತ್ತಡವಿಲ್ಲದೆ ನನ್ನ ಸೃಜನಶೀಲತೆ ಬಳಸಿ ಕೆಲಸ ಮಾಡಬಹುದು ಎನ್ನುತ್ತಾರೆ’ ಅರ್ಜುನ್ ಜನ್ಯ. ಈಗಾಗಲೇ ಶೂಟಿಂಗ್ ಮುಗಿದಿರುವ ಸಿನಿಮಾಗಳ ಹಾಡನ್ನು ಕಂಪೋಸ್ ಮಾಡುವ, ರಿರೆಕಾರ್ಡಿಂಗ್ ಮಾಡುವಲ್ಲಿ ಅರ್ಜುನ್ ಸದ್ಯ ಅವರನ್ನು ತೊಡಗಿಸಿಕೊಂಡಿದ್ದಾರೆ.


ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಸಿನಿಮಾ, ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’, ಶಿವ ಕಾರ್ತೀಕ್ ನಿರ್ದೇಶನದ, ಸುದೀಪ್ ಅಭಿನಯದ ‘ಕೋಟಿಗೊಬ್ಬ 3’, ಯೋಗರಾಜ್ ಭಟ್ ಅಭಿನಯದ ‘ಗಾಳಿಪಟ 2’, ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’, ಶರಣ್ ಅವರ ‘ಅವತಾರ ಪುರುಷ’, ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋ ಸೀಟ್’ ಮರಾಠಿಯಲ್ಲಿ ಮಾಡಿದ ‘ರಾಜಸ್ಥಾನ ಡೈರೀಸ್’ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಅರ್ಜುನ್ ಜನ್ಯ.

Continue Reading
News8 mins ago

ಕೊರೊನಾ ಹೋರಾಟಕ್ಕೆ 10 ಲಕ್ಷ ದೇಣಿಗೆ ನೀಡಿದ್ದಾರೆ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು

Karnataka22 mins ago

ಮುಖ್ಯಮಂತ್ರಿಗಳೇ ಕರುಣೆ ತೋರಿಸಿ ನಮ್ಮನ್ನು ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಆಂಧ್ರಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರು

Film News2 hours ago

ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿಕೊಂಡ ಟಾಲಿವುಡ್ ನಟ ಅಲ್ಲು ಸಿರಿಶ್ ಡಾರ್ಲಿಂಗ್ ಕೃಷ್ಣ ಅವರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ

News2 hours ago

ಕೊರೊನಾ ವೈರಸ್ ಅನ್ನು ಬೌಲ್ ಔಟ್ ಮಾಡೋಣ ಎಂದಿದ್ದಾರೆ ಕ್ರಿಕೆಟಿಗ ಅನಿಲ್ ಕುಂಬ್ಳೆ !

Film News9 hours ago

ಕನ್ನಡದಲ್ಲಿ ಧನ್ಯವಾದ ಹೇಳಿ ಕನ್ನಡಿಗರ ಹೃದಯ ಗೆದ್ದ ಸ್ಟಾರ್ ನಿರ್ದೇಶಕ ರಾಜಮೌಳಿ!

Karnataka11 hours ago

ಜೀವ ಭಯ ಬಿಟ್ಟು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಿಚ್ಚನ ಸಲ್ಯೂಟ್!

Film News13 hours ago

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೇಲಿದೆ ಭಾರಿ ಒತ್ತಡ : ಮನದ ಮಾತು ಹೇಳಿದ್ದಾರೆ ಅರ್ಜುನ್ ಜನ್ಯ

Film News13 hours ago

1988ರಲ್ಲಿ 26 ಖೈದಿಗಳನ್ನು 28 ಲಕ್ಷ ದಂಡ ಕಟ್ಟಿ ಬಿಡಿಸಿದ್ದರು ದೊಡ್ಮನೆ ಮಗ ಶಿವರಾಜ್‌ಕುಮಾರ್‌

Karnataka15 hours ago

ಬಿಬಿಕೆ7 ಸ್ಪರ್ಧಿ ದೀಪಿಕಾ ದಾಸ್ ಸಿಎಂ ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ ನೀಡಿ ಹೃದಯವಂತಿಗೆ ತೋರಿದ್ದಾರೆ !

Film News15 hours ago

ಲಾಕ್ ಡೌನ್ ನಲ್ಲಿ ಸುಮಾರು 1800 ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿದ್ದಾರೆ ಕನ್ನಡದ ನಟಿ ಸಂಯುಕ್ತಾ ಹೊರನಾಡ್

Kollywood1 week ago

ಲಂಡನ್ ನಿಂದ ವಾಪಸ್ ಆದ ನಂತರ ಸ್ವಯಂ ಗೃಹ ಬಂಧನದಲ್ಲಿರುವ ನಟಿ ಸುಹಾಸಿನಿ ಅವರ ಮಗ ನಂದನ್!

Bollywood2 weeks ago

ಬಟ್ಟೆ ಜಾರಿ ಮುಜುಗರಕ್ಕೆ ಒಳಗಾದ ನಟಿ ಶ್ರದ್ಧಾ ಕಪೂರ್!

News6 days ago

ಇಂದಿನಿಂದ ಬೆಂಗಳೂರಿನಲ್ಲಿ ನಿತ್ಯ ಬಳಕೆ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ

Karnataka3 weeks ago

ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿ ಬರುತ್ತಿರುವ ಚಂದನ್-ನಿವೇದಿತಾಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ಆಗಲೇಬೇಕೆಂದು NSUI ಆಗ್ರಹ!

Film News2 weeks ago

ಇಡೀ ಸ್ಯಾಂಡಲ್ ವುಡ್ ಮೆಚ್ಚುವಂಥ ಕೆಲಸಕ್ಕೆ ಮುಂದಾಗಿದ್ದಾರೆ ಪವರ್ ಸ್ಟಾರ್ ಮಗಳು ಧೃತಿ!

Videos1 week ago

ಅಪ್ಪನಿಗೆ ಆಯ್ರಾಳ ಮುದ್ದಾದ ಕೈತುತ್ತು! ಅಪ್ಪ ಮಗಳ ಬಾಂಧವ್ಯಕ್ಕೆ ಇನ್ಯಾವುದು ಸಾಟಿ ಇಲ್ಲ!

Film News1 week ago

ಅವೈಜ್ಞಾನಿಕ ತಿಯರಿಗಳನ್ನು ಹರಡಬೇಡಿ ಎಂದು ಕಿಚ್ಚ ಸುದೀಪ್ ಗೆ ಬುದ್ಧಿವಾದ ಹೇಳಿದ ನಟ ಚೇತನ್!

gossip3 weeks ago

ಡೈರೆಕ್ಟರ್ ಪ್ರಕಾಶ್ ಕೊವೆಲಮುಡಿ ಅವರ ಜೊತೆಗೆ ವಿವಾಹದ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ ಕಡಲ ಕಿನ್ನರಿ ಅನುಷ್ಕಾ ಶೆಟ್ಟಿ!

Film News4 weeks ago

ಕಿಚ್ಚನ ಕಿಚನ್ ಹೇಗಿದೆ ಗೊತ್ತಾ? ಈ ಫೋಟೋ ಗ್ಯಾಲರಿ ನೋಡಿ!

Kannada Music5 days ago

ಕೊರೊನಾ ಜಾಗೃತಿ ಕುರಿತಾಗಿ ವಾರಿಜಾಶ್ರೀ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ

Trending