Film News

ದಿನಾಂಕ ಮರೆತು ವಿಶ್ ಮಾಡಿ ಟ್ರೋಲ್ ಆದ ಕಿಚ್ಚ

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬಕ್ಕೆ ಇನ್ನು 2 ದಿನ ಇರುವಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ಆಚರಣೆ ಮಾಡಲು ಶುರುಮಾಡಿದ್ದಾರೆ.

ಇದೇ ಸಮಯದಲ್ಲಿ ನಟ ಕಿಚ್ಚ ಸುದೀಪ್ ಈವತ್ತು ಮಧ್ಯಾಹ್ನ ಗಣೇಶ್ ಹುಟ್ಟುಹಬ್ಬಕ್ಕೆ ಟ್ವಿಟರ್ ನಲ್ಲಿ ವಿಶ್ ಮಾಡಿದ್ದಾರೆ.
“ನನ್ನ ಗೆಳೆಯ ಗಣೇಶ್, ಯಾವಾಗಲೂ ಸಂತೋಷವಾಗಿ ಆರೋಗ್ಯವಾಗಿರಿ.. ದೇವರ ಆಶೀರ್ವಾದ ನಿಮ್ಮ ಮೇಲಿರಲಿ.. ಹೌದು.. ಕ್ವಾರಂಟೈನ್ ಸಮಯದಲ್ಲಿ ಬಿಯರ್ಡ್ ಗಳೇ ಹೊಸ ಸಿಕ್ಸ್ ಪ್ಯಾಕ್..ನಿಮಗೆ ಹೆಚ್ಚು ಯಶಸ್ಸು ಸಿಗಲಿ.. ಪ್ರೀತಿಯಿಂದ.. ಚಿಯರ್ಸ್..” ಎಂದು ಟ್ವೀಟ್ ಮಾಡಿದ್ದಾರೆ ಕಸುದೀಪ್.

ಸುದೀಪ್ ಈ ರೀತಿ ಟ್ವೀಟ್ ಮಾಡಿದ ಕೂಡಲೇ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದರೆ. ಗಣೇಶ್ ಅವರ ಹುಟ್ಟುಹಬ್ಬ ಜುಲೈ 2 ರಂದು, ಸುದೀಪ್ ಅವರು ಇಂದೇಕೆ ವಿಶ್ ಮಾಡಿದ್ದಾರೆ ಎಂದು ರಿಪ್ಲೈ ಮಾಡಿದ್ದಾರೆ. ಇದನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ಇನ್ನು ಕೆಲವು ಜನರು ಸುದೀಪ್ ರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಗಣೇಶ್ ಹುಟ್ಟುಹಬ್ಬ ಇಂದಲ್ಲ ಎಂದು ಗೊತ್ತಾದ ಕೂಡಲೇ ಮತ್ತೊಂದು ಟ್ವೀಟ್ ಮೂಲಕ ಇದನ್ನು ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿ ಎಂದಿದ್ದಾರೆ ಸುದೀಪ್..
“ದಿನಾಂಕವನ್ನು ನಾನು ತಪ್ಪಾಗಿ ಭಾವಿಸಿದರಿಂದ ಇದನ್ನು ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿ…
ಎಲ್ಲವೂ ಹೇಳಿ ಆಗಿದೆ, ಸಿಂಪಲ್ ಹಾಗೂ ಕಾಮ್ ಆಗಿ ಬರ್ತ್ ಡೇ ಆಚರಿಸಿ ..” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ…

ಇದಕ್ಕೆ ಪ್ರತಿಕ್ರಿಯಿಸಿರುವ ಗೋಲ್ಡನ್ ಸ್ಟಾರ್ ಗಣೇಶ್..
“ನಿಮ್ಮದೇ ನನಗೆ ಮೊದಲ ವಿಶ್.. ಬಹಳ ಧನ್ಯವಾದಗಳು ಸರ್..” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Trending

To Top