Kannada Cinema News

ದರ್ಶನ್ ನನ್ನ ಜೊತೆ ಇರೋ ತನಕ ಗೆಲ್ತಾನೆ ಇರ್ತೇನೆ: ಸುಮಲತಾ ಅಂಬರೀಶ್

ದರ್ಶನ್ ನನ್ನ ಜೊತೆ ಇರೋ ತನಕ ನಾನು ಗೆಲ್ತಾನೆ ಇರ್ತೀನಿ ಅಂತಾ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇಂದು ಸಂಜೆ ನಗರದ ಖಾಸಗಿ ಹೋಟೆಲ್ನಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ v/s ಇಂಗ್ಲೆಂಡ್ ಸಿನಿಮಾದ ಟ್ರೈಲರ್ ಅನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಂಚ್ ಮಾಡಿದರು. ಬಳಿಕ ಕನ್ನಡ ಭಾಷೆ ಕುರಿತು ಮಾತನಾಡಿದರು. ಇದೆ ವೇಳೆ ಹಾಜರಿದ್ದ ಸಂಸದೆ ಸುಮಲತಾ ಅಂಬರೀಷ್ ಕುರಿತು ಮಾತನಾಡಿದ ದರ್ಶನ್,
ಈ ವಯಸ್ಸಲ್ಲೂ ಇಷ್ಟೊಂದು ಯಂಗ್ ಆಗಿದ್ದೀರಲ್ಲ ಅಮ್ಮಾ ಅಂತಾ ಸುಮಲತಾರ ಕಾಲೆಳೆದರು.

ಆಗ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿ, ದರ್ಶನ್ ನನ್ನ ಜೊತೆ ಇರೋ ತನಕ ನಾನು ಗೆಲ್ತಾನೆ ಇರ್ತೀನಿ ಅಂತಾ ಹೇಳಿದರು.

Trending

To Top