News

ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಅಭಿನಯದ ದಬಾಂಗ್ 3 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೇ ಡಿಸೆಂಬರ್ 20 ರಂದು ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತೆರೆಕಾಣುತ್ತಿದೆ.

ಇದೀಗ, ದಬಾಂಗ್ 3 ಸಿನಿಮಾ ರಿಲೀಸ್ ಗೂ ಮೊದಲೇ ಸಲ್ಲು ಭಾಯ್ ಬಿಟೌನ್ ಗೆ ಸರ್ಪ್ರೈಸ್ ನೀಡಿದ್ದಾರೆ. ದಬಾಂಗ್ ಚಿತ್ರದ ಸರಣಿ ಮತ್ತೆ ಮುಂದುವರಿಯುತ್ತೆ ಎಂಬ ಸುಳಿವು ನೀಡಿದ್ದಾರೆ ಬ್ಯಾಡ್ ಬಾಯ್ ಸಲ್ಲು.

‘ದಬಾಂಗ್’ ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!

ಹೌದು, ದಬಾಂಗ್ 4 ಸಿನಿಮಾ ಮಾಡುವ ತಯಾರಿ ನಡೆಸಿರುವ ಬಗ್ಗೆ ಖುದ್ದು ಸಲ್ಮಾನ್ ಖಾನ್ ಮಾತನಾಡಿದ್ದಾರೆ. ”ನಾವು ಈಗಾಗಲೇ ದಬಾಂಗ್ 4 ಸ್ಕ್ರಿಪ್ಟ್ ರೆಡಿ ಮಾಡಿದ್ದೀವಿ” ಎಂದು

ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ ‘ದಬಾಂಗ್’ ಚುಲ್ ಬುಲ್ ಪಾಂಡೆ

ಸಲ್ಮಾನ್ ಖಾನ್ ಮಾತು ಕೇಳಿದ್ರೆ ದಬಾಂಗ್ 4 ಮಾಡುವುದು ಖಚಿತ ಎಂಬ ಅನುಮಾನ ಕಾಡುತ್ತಿದೆ. ಆದರೆ, ಎಷ್ಟು ಗಂಭೀರವಾಗಿ ಹೇಳಿದ್ರು ಅಥವಾ ಕಾಮಿಡಿಯಾಗಿ ಹೇಳಿದ್ರಾ ಎನ್ನುವುದು ಅರ್ಥವಾಗದ ಮಾತಾಗಿದೆ.

ಅಂದ್ಹಾಗೆ, ದಬಾಂಗ್ 3 ಚಿತ್ರವನ್ನು ಪ್ರಭುದೇವ ನಿರ್ದೇಶನ ಮಾಡಿದ್ದು, ಸುದೀಪ್, ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಅರ್ಬಾಜ್ ಖಾನ್ ಜಂಟಿಯಾಗಿ ನಿರ್ಮಿಸಿದ್ದಾರೆ.

ಮೂಲಕ ಅಚ್ಚರಿ ನೀಡಿದ್ದಾರೆ.

Trending

To Top