ದಕ್ಷಿಣ ಭಾರತದ ಹೆಸರಾಂತ ನಟಿ ಶೋಭನ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ !

ದಕ್ಷಿಣ ಭಾರತದ ತಮಿಳು, ಮಲಯಾಳಂ ಮತ್ತು ಕೆಲವು ಕನ್ನಡ ಚಿತ್ರಗಳಲ್ಲೂ ನಟಿಸಿದ್ದ, 80ರ ದಶಕದ ಹೆಸರಾಂತ ನಟಿ ಶೋಭನಾ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದ್ದು, ಈ ಬಗ್ಗೆ ಅವರು.. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹರಿ ಬಿಟ್ಟ ನಟಿ ಶೋಭನಾ, “ಸ್ನೇಹಿತರೆ.. ಯಾರೋ ನನ್ನ ಫೇಸ್ಬುಕ್ ಖಾತೆಯನ್ನು ಬಳಕೆ ಮಾಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಂತರ ಫೇಸ್ಬುಕ್ ಖಾತೆ ಸರಿಯಾಗಿದೆ. ನಿಮ್ಮ ಸಪೋರ್ಟ್ ಹೀಗೆ ಇರಲಿ ಧನ್ಯವಾದಗಳು” ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ

ನಟಿ ಶೋಭನಾ 90ರ ದಶಕದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ,ಮಲಯಾಳಂ ನಟರಾದ ಮಮ್ಮೂಟಿ , ಮೋಹನ್ ಲಾಲ್ ಜೊತೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಶೋಭನಾ ನಟನೆ ಮಾತ್ರವಲ್ಲದೆ ನೃತ್ಯಗಾರ್ತಿಯೂ ಹೌದು. ಅವರದೇ ಆದ ನರ್ತನಶಾಲೆಯನ್ನು ಸ್ಥಾಪಿಸಿ, ಅದರಲ್ಲಿ ಆಸಕ್ತಿ ಇರುವ ಅನೇಕರಿಗೆ ನೃತ್ಯ ನೀಡುತ್ತಿದ್ದಾರೆ ನಟಿ ಶೋಭನ .

ಇತ್ತೀಚೆಗೆ ಅನೂಪ್ ಸತ್ಯನ್ ನಿರ್ದೇಶನದ ಮಲಯಾಂ ‘ವರನೇ ಅವಶ್ಯಮುಂಡು‘ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಶೋಭನಾ 1984ರಿಂದ ಸಿನಿ ಜರ್ನಿಯನ್ನು ಪ್ರಾರಂಭಿಸಿದರು. ಏಪ್ರಿಲ್ 18 ಇವರು ನಟಿಸಿದ ಮೊದಲ ಸಿನಿಮಾವಾಗಿದೆ.

1982ರಿಂದ ತಮಿಳು ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದರು. ‘ಭಕ್ತದ್ರುವ ಮಾರ್ಕಂಡೇಯ‘ ಇವರು ತಮಿಳಿನಲ್ಲಿ ನಟಿಸಿದ ಮೊದಲ ಸಿನಿಮಾವಾಗಿದೆ. ಕನ್ನಡದಲ್ಲಿ 1985ರಲ್ಲಿ ಬಿಡುಗಡೆಯಾದ ಗಿರಿ ಬಾಲೆ ಮತ್ತು 1990ರಲ್ಲಿ ಬಿಡುಗಡೆಯಾದ ಶಿವಶಂಕರ ಸಿನಿಮಾದಲ್ಲಿ ನಟಿಸಿದ್ದರು.

Previous articleಅಣ್ಣಾವ್ರ ಹುಟ್ಟುಹಬ್ಬದಂದು ಸಿಹಿ ಸುದ್ದಿ ನೀಡಲಿದ್ದಾರೆ ಅಣ್ಣಾವ್ರ ಮೊಮ್ಮಗ !
Next articleರಾಕಿ ಭಾಯ್ ಮಗಳು ಆಯ್ರಾ ಯಶ್ ಮುದ್ದಾದ ಫೋಟೋ ಕಲೆಕ್ಷನ್ಸ್