health-Kannada

ತರಕಾರಿ ತರುವ ಮುನ್ನ ಈ ವಿಷಯಗಳನ್ನು ನೆನಪಿಡಿ

ಕೊರೊನಾ ವೈರಸ್ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಅಪಾರ ಪ್ರಮಾಣದ ಹಾನಿ ಮಾಡಿ ಹಾಕಿದೆ. ಆರ್ಥಿಕ ಕುಸಿತದೊಂದಿಗೆ ಜನಜೀವನವೂ ಅಸ್ತವ್ಯಸ್ತಗೊಂಡಿದೆ.

ಈ ಸಂದರ್ಭದಲ್ಲಿ ನೀವು ಹೊರಗಿನಿಂದ ತರುವ ತರಕಾರಿಗಳನ್ನು ಮನೆಯೊಳಗೆ ಕೊಂಡೊಯ್ಯುವ ಮುನ್ನ ಹೀಗೆ ಮಾಡಿ.

ಎಲ್ಲಾ ತರಕಾರಿಗಳನ್ನು ಸ್ವಚ್ಛವಾಗಿ ತೊಳೆದ ಬಳಿಕವೇ ಒಳಗೊಯ್ಯಿರಿ. ಚಿಟಿಕೆ ಉಪ್ಪು ಬೆರೆಸಿದ ನೀರಿನಲ್ಲಿ ತರಕಾರಿಗಳನ್ನು ಅದ್ದಿ. ಕೈಯಿಂದಲೇ ತಿಕ್ಕಿ ತೊಳೆಯಿರಿ.

ಬಳಿಕ ವಸ್ತ್ರದಲ್ಲಿ ಹರಡಿ ಒಣಗಲು ಬಿಡಿ. ಎರಡು ಗಂಟೆ ಬಳಿಕವೇ ಫ್ರಿಡ್ಜ್ ಗೆ ವರ್ಗಾಯಿಸಿ. ಹಣ್ಣುಗಳಿಗೂ ಇದೇ ಕ್ರಮವನ್ನು ಅನುಸರಿಸಿ. ಸಿಪ್ಪೆ ತೆಗೆಯದೆ ಯಾವುದೇ ಹಣ್ಣನ್ನು ಸೇವಿಸುವುದು ಬೇಡ.

ತರಕಾರಿ ಹೆಚ್ಚುವಾಗ ಸಾಧ್ಯವಾದರೆ ಸಿಪ್ಪೆಯನ್ನು ಪ್ರತ್ಯೇಕಿಸಿ. ಪ್ಯಾಕೆಟ್ ಹಾಲನ್ನು ತೊಳೆಯದೆ ಫ್ರಿಡ್ಜ್ ನಲ್ಲಿ ಇಡಬೇಡಿ. ಕೋಲ್ಡ್ ಆಗಿರುವ ಜ್ಯೂಸ್ ಸೇವನೆಯಿಂದ ಸಾಧ್ಯವಾದಷ್ಟು ದೂರವಿರಿ.

Trending

To Top