Film News

ತಮ್ಮ ಹಳೆಯ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ ಅನುಷ್ಕಾ ಶೆಟ್ಟಿ!

ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅನುಷ್ಕಾ ತೆಲುಗಿನ ಖ್ಯಾತ ನಿರ್ದೇಶಕರನ್ನು ಮದುವೆ ಆಗುತ್ತಿದ್ದಾರೆ, ಕ್ರಿಕೆಟರ್ ಅನ್ನು ಮದುವೆ ಆಗುತ್ತಾರೆ ಹೀಗೆ ಸ್ವೀಟಿಯ ಮದುವೆ ವಿಚಾರ ಇತ್ತೀಚಿಗೆ ಸಖತ್ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೆ ಈಗ ನಟಿ ಅನುಷ್ಕಾ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿ ಇರುವ ಅನುಷ್ಕಾ, ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ “ನಾನು ಒಬ್ಬರನ್ನು ತುಂಬಾ ಪ್ರೀತಿಸುತ್ತಿದ್ದೆ” ಎಂದು ಹೇಳುತ್ತ ಲವ್ ಲೈಫ್ ಜೀವನವನ್ನು ತೆರೆದಿಟ್ಟಿದ್ದಾರೆ. ಮುಂದೆ ಓದಿ..

ನಟಿ ಅನುಷ್ಕಾ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

“ನಾನು ಕೂಡ ಒಬ್ಬರನ್ನು ಪ್ರೀತಿಸುತ್ತಿದ್ದೆ. ಆದರೆ 2008ರಲ್ಲಿಯೆ ಇಬ್ಬರು ಬೇರೆ ಬೇರೆ ಆದೆವು. ನಮ್ಮಿಬ್ಬರ ಪ್ರೀತಿಯ ಜೀವನ ತುಂಬ ಸುಂದರವಾಗಿತ್ತು. ಆದರೆ 2008ರಲ್ಲಿ ಬ್ರೇಕ್ ಅಪ್ ಆಯಿತು. ಮಾತುಕತೆಯ ಮೂಲಕ ಇಬ್ಬರು ಪ್ರೀತಿಯ ಸಂಬಂಧವನ್ನು ಕಡಿದುಕೊಂಡೆವು. ಆದರೆ ಆ ವ್ಯಕ್ತಿ ಯಾರು ಎಂದು ಹೇಳಲು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.
“ನಾವಿಬ್ಬರು ಬೇರೆ ಬೇರೆ ಆದರೂ, ಇಬ್ಬರ ಸ್ನೇಹ ಚೆನ್ನಾಗಿಯೆ ಇದೆ. ಇಬ್ಬರ ನಡುವೆ ಸಣ್ಣ ಭಿನ್ನಾಭಿಪ್ರಾಯಗಳಿದ್ದವು ಹಾಗಾಗಿ ಬೇರೆ ಬೇರೆ ಆದೆವು. ಈಗ ಅವರ ಹೆಸರನ್ನು ಹೇಳಿದರೆ ಆ ವ್ಯಕ್ತಿಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ನನ್ನ ಮತ್ತು ಅವರ ಸಂಬಂಧ ತೀರ ವೈಯಕ್ತಿಕವಾದದ್ದು” ಎಂದು ಹೇಳಿದ್ದಾರೆ.

Trending

To Top