Film News

ತಮ್ಮ ಕ್ರಶ್ ಬಗ್ಗೆ ಬರೆದಿದ್ದಾರೆ ಸ್ಯಾಂಡಲ್ ವುಡ್ ಕ್ರಶ್ ಅದಿತಿ ಪ್ರಭುದೇವಾ

ಚಂದನವನದ ಕ್ಯೂಟ್ ಹುಡುಗಿ ಅದಿತಿ ಪ್ರಭುದೇವಾ ಸ್ಯಾಂಡಲ್‍ವುಡ್‍ನಲ್ಲಿ ಇತೀಚೆಗೆ ತುಂಬಾ ಸದ್ದು ಮಾಡುತ್ತಿದ್ದಾರೆ ಅಂದ್ರೆ ತಪ್ಪಾಗಲಾರದು. ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಅಲ್ಲದೆ ಇತ್ತೀಚಿನ ಬ್ಯುಸಿಯೆಸ್ಟ್ ನಟಿಯರಲ್ಲಿ ಅದಿತಿ ಕೂಡ ಒಬ್ಬರು. ಹೀಗಿರುವಾಗ ತಮ್ಮ ಕ್ರಶ್ ಕುರಿತು ಹೇಳಿದರೆ ಯಾರ ಕಿವಿ ನಿಮಿರುವುದಿಲ್ಲ ಹೇಳಿ.

ಅದಿತಿ ಪ್ರಭುದೇವ ಅವರು ಬ್ರಹ್ಮಚಾರಿ ಸಿನಿಮಾ ನಂತರ ಹಲವರಿಗೆ ಫೆವರಿಟ್ ನಟಿಯಾಗಿ, ತಮ್ಮ ನಟನೆ ಮೂಲಕ ಹುಡುಗರ ಮನಸ್ಸು ಕದ್ದಿದ್ದಾರೆ. ಯಾವ ಪಾತ್ರ ಕೊಟ್ಟರೂ ಸುಲಭವಾಗಿ ನಿಭಾಯಿಸಬಲ್ಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅವರು ಇತ್ತೀಚೆಗೆ ನಟಿಸಿರುವ ‘ಒಂಬತ್ತನೇ ದಿಕ್ಕು’ ಸಿನಿಮಾ. ಈ ಸಿನಿಮಾದಲ್ಲಿ ಲೂಸ್ ಮಾದ ಹಾಗೂ ಅದಿತಿ ಪ್ರಭುದೇವ ವೃದ್ಧರ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಹಿಂದೆ ಬ್ರಹ್ಮಚಾರಿ ಸಿನಿಮಾದಲ್ಲಿ ಹೆಂಡತಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ಅದಿತಿ, ಈಗ ವೃದ್ಧೆಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಓಲ್ಡ್ ಮಾಂಕ್ ಸಿನಿಮಾಗೆ ಸಹ ಸಹಿ ಹಾಕಿದ್ದಾರೆ. ಹೀಗೆ ನಾನಾ ಪಾತ್ರಗಳಲ್ಲಿ ಅದಿತಿ ಪ್ರಯೋಗ ನಡೆಸುತ್ತಿದ್ದಾರೆ. ಆದರೆ ಇದೀಗ ತಮ್ಮ ಕ್ರಶ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇವಲ ಹುಡುಗರಿಗೆ ಮಾತ್ರವಲ್ಲ, ಬಹುತೇಕ ಹುಡುಗಿಯರಿಗೂ ಬೈಕ್‍ಗಳ ಮೇಲೆ ಕ್ರಶ್ ಆಗುತ್ತದೆ. ವಿಶೇಷವಾಗಿ ರಾಯಲ್ ಎನ್ಫೀಲ್ಡ್ ಎಂದು ಬರೆದುಕೊಂಡಿದ್ದಾರೆ. ಹಳೆಯ ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಕುಳಿತಿರುವ ಫೋಟೋಗಳನ್ನು ಹಾಕಿದ್ದಾರೆ. ಈ ಮೂಲಕ ರಾಯಲ್ ಎನ್ಫೀಲ್ಡ್ ಬೈಕ್ ಮೇಲಿನ ತಮ್ಮ ಕ್ರಶ್ ಹೊರ ಹಾಕಿದ್ದಾರೆ.

https://www.instagram.com/p/B_bhG02DJzg/?igshid=iimjcamgifc0

Trending

To Top