Film News

ಚಿರು ಬಗ್ಗೆ ತಡವಾಗಿ ಟ್ವೀಟ್ ಮಾಡಿ ಟ್ರೋಲ್ ಆದ ನಟ ರಕ್ಷಿತ್ ಶೆಟ್ಟಿ

ಭಾನುವಾರ ಮಧ್ಯಾಹ್ನ ಯುವಸಾಮ್ರಾಟ್ ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದಾಗಿ ನಿಧನರಾದರು. ಇಂದಿಗೂ ಸಹ ಕರ್ನಾಟಕದ ಜನತೆಗೆ ಈ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಚಿರು ಅಭಿಮಾನಿಗಳು ಹಾಗೂ ಕುಟುಂಬದವರ ನೋವು ಹೇಳತೀರದು.

ಇಡೀ ಸ್ಯಾಂಡಲ್ ವುಡ್ ಚಿರು ಅವರ ಹಠಾತ್ ನಿಧನಕ್ಕೆ ಕಂಬನಿ ಮಿಡಿದಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ಹಲವಾರು ಕಲಾವಿದರು ಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಬಹಳ ತಡವಾಗಿ ಟ್ವೀಟ್ ಮಾಡಿ, ಟ್ರೋಲ್ ಆಗಿದ್ದಾರೆ.

ಚಿರು ನಿಧನದ ಬಗ್ಗೆ ನಿನ್ನೆ ಸಂಜೆ ಟ್ವೀಟ್ ಮಾಡಿದ್ದಾರೆ ರಕ್ಷಿತ್ ಶೆಟ್ಟಿ.. “ನಿಮ್ಮ ನಗುಮುಖ ಮಾತ್ರ ನನಗೆ ನೆನಪಿದೆ. ಎಲ್ಲರ ಹೃದಯದಲ್ಲೂ ನೀವು ಅದನ್ನು ಉಳಿಸಿದ್ದೀರಿ. ರೆಸ್ಟ್ ಇನ್ ಪೀಸ್ ಬ್ರದರ್ .. ರೆಸ್ಟ್ ಇನ್ ಪೀಸ್..” ಎಂದು ಟ್ವೀಟ್ ಮಾಡಿದ್ದಾರೆ ರಕ್ಷಿತ್..

ಕೆಲ ನೆಟ್ಟಿಗರು ರಕ್ಷಿತ್ ಶೆಟ್ಟಿ ತಡವಾಗಿ ಟ್ವೀಟ್ ಮಾಡಿರುವುದಕ್ಕೆ, ನಿಮ್ಗೆ ಈಗ ಎಚ್ಚರ ಆಯಿತಾ ಎಂದು ಪ್ರಶ್ನೆ ಕೇಳಿ, ರಕ್ಷಿತ್ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನಿಮ್ಗೆ ಇವಾಗ ಎಚ್ಚರ ಆಯ್ತಾ ಸರ್” ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಬ್ಬರು.. “ಬಾಸ್ ಗೆ ಈಗ ಜ್ಞಾಪಕಕ್ಕೆ ಬಂದಿರಬೇಕೇನೋ, ಅವನೇ ಶ್ರೀಮನ್ನಾರಾಯಣ ಫ್ಲಾಪ್ ಆಯ್ತಲ್ಲಾ ಈಗ ಯಾರು ಬೇಡವಾಗಿದೆ..” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Trending

To Top