Film News

ತಂದೆ-ಮಗಳ ಬಾಂಧವ್ಯದ ಬಗ್ಗೆ ರಶ್ಮಿಕಾ ಮಾತುಗಳು

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ತಂದೆಯ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

“ಅಪ್ಪಂದಿರು …. ಹಾ..ಇವರ ಬಗ್ಗೆ ಏನು ಅಂತ ಹೇಳೋದು … ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದರು, ನಾನು ಹುಟ್ಟುವ ಎರಡು ದಿನಗಳ ಹಿಂದೆ, ನಾನು ಅವರ ಕನಸಿನಲ್ಲಿ ಉದ್ದ ಕೂದಲು, ದೊಡ್ಡ ಕಣ್ಣು, ನೀಳವಾದ ಮೂಗು ಇರುವ ಮಗು ಅವರ ಹೊಟ್ಟೆಯ ಮೇಲೆ ಕುಣಿಯುತ್ತಿರುವಂತೆ ಅವರ ಕನಸಿನಲ್ಲಿ ಕಂಡಿದ್ದರಂತೆ… ನಾನು ಮಗುವಾಗಿದ್ದಾಗ ಅವರು ಯಾವಾಗಲೂ ವ್ಯವಹಾರಗಳನ್ನು ನೋಡಿಕೊಳ್ಳುವ ಸಲುವಾಗಿ ದೂರವಿರುತ್ತಿದ್ದರು ನಂತರ ವಿದ್ಯಾಭ್ಯಾಸಕ್ಕಾಗಿ ನನ್ನ ಜೀವನದ ಬಹುಪಾಲು ಹಾಸ್ಟೆಲ್‌ ನಲ್ಲಿ ಕಳೆಯುವ ಸಮಯ ಬಂದಿತು, ನಂತರ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ನಾನು ಮನೆಯಿಂದ ಹೊರಗೇ ಇರುವಂತಾಯಿತು.. ಇದರ ಜೊತೆಗೆಯೇ ನಾನು ಚಲನಚಿತ್ರಗಳಲ್ಲಿ ತೊಡಗಿಸಿಕೊಂಡೆ … ಈಗ ನಾನು ಅವರ ಬ್ಯುಸಿನೆಸ್ ಪಾರ್ಟ್ ನರ್ ಆಗಿದ್ದೇನೆ .. ಈ ಎಲ್ಲದರ ಮೂಲಕ ಅವರು ನನ್ನ ಜೀವನಕ್ಕೆ ಪಿಲ್ಲರ್ ಯಾಗಿದ್ದಾರ್ರ್.. ನಾವಿಬ್ಬರೂ ಒಟ್ಟಾಗಿ ಹೆಚ್ಚು ಸಮಯ ಕಳೆದಿಲ್ಲ, ಆದರೆ ನಮ್ಮಿಬ್ಬರಿಗೂ ಗೊತ್ತು, ನಾನು ಯಾವಾಗಲೂ ಅವರ ಪಿಲ್ಲರ್ ಆಗಿರುತ್ತೇನೆ ಮತ್ತು ಅವರು ನನ್ನ ಜೀವನದ ಪಿಲ್ಲರ್ ಆಗಿರುತ್ತಾರೆ ಎಂದು.
ಇದನ್ನು ನಾನು ಏಕೆ ಹೇಳುತ್ತಿದ್ದೇನೆ ಅಂದರೆ, ನಿಮ್ಮಲ್ಲಿ ಹಲವಾರು ಜನ ನಿಮ್ಮ ತಂದೆಗೂ ನಿಮಗೂ ಸ್ವಲ್ಪ ಅಂತರವಿದೆ ಎಂದು ಭಾವಿಸುತ್ತೀರಿ.. ಆದರೆ ನಿಜವಾದ ವಿಷಯ ಏನು ಅಂದರೆ, ನೀವು ನಿಮ್ಮ ತಂದೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ, ಅವರ ಕಣ್ಣಿನಲ್ಲಿ ನೀವೇ ದೊಡ್ಡ ಪಿಲ್ಲರ್ ಎಂಬುದು ತಿಳಿಯುತ್ತದೆ.
ಅವರು ನಮಗಾಗಿ ಬಹಳ ಶ್ರಮಪಟ್ಟು ಕೆಲಸ ಮಾಡುತ್ತಾರೆ.. ನಾವು ಆಯ್ಕೆ ಮಾಡುವ ಕೆಲವೊಂದು ವಿಷಯಗಳ ಬಗ್ಗೆ ಅವರು ಬಹಳ ಕಟ್ಟುನಿಟ್ಟಾಗಿ ಇರುತ್ತಾರೆ.. ಏಕೆಂದರೆ ಅತ್ಯುತ್ತಮವಾದದ್ದು ನಮಗೆ ಸಿಗಬೇಕು ಎಂಬುದು ಅವರ ಉದ್ದೇಶವಾಗಿರುತ್ತದೆ.
ತಂದೆಯರು ಅವರ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ, ಏಕೆಂದರೆ, ದುರ್ಬಲವಾದ ಗಂಡಸರು ಮಾತ್ರಾ ಭಾವನೆಗಳನ್ನು ಹೊರಹಾಕುತ್ತಾರೆ ಎಂದು ಸಮಾಜದಲ್ಲಿ ಹೇಳಲಾಗುತ್ತದೆ..
ಅವರು ತಮ್ಮ ಮಕ್ಕಳನ್ನು ಅಮ್ಮಂದಿರಂತೆ ಪ್ರೀತಿಸಬಹುದೇ?
ಹೌದು!
ನನ್ನ ತಂದೆ ಭಾವನೆಗಳನ್ನು ವ್ಯಕ್ತಪಡಿಸುವ ವಿಧಾನವನ್ನು ಅರ್ಥಮಾಡಿಕೊಳ್ಳಲು ನನಗೆ ವರ್ಷಗಳು ಬೇಕಾಯಿತು.
ನಾನು ಯಾರನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ನೀವು ನನ್ನನ್ನು ಕೇಳಿದರೆ?
ಅಮ್ಮ ಅಥವಾ ಅಪ್ಪ?
ನನ್ನ ಉತ್ತರ ಏನಿರಬಹುದು ಎಂದು ನೀವು ಅಂದುಕೊಳ್ಳುತ್ತೀರಾ ?..” ಎಂದು ಬರೆದಿದ್ದಾರೆ ರಶ್ಮಿಕಾ ಮಂದಣ್ಣ..

https://www.instagram.com/p/CBdpDAZJ6SB/?igshid=gyiex6oap4ex

ತಂದೆಯ ಬಗ್ಗೆ, ಆತನ ಜವಾಬ್ದಾರಿಗಳ ಬಗ್ಗೆ, ಬಹಳ ಚೆನ್ನಾಗಿ ಬರೆದಿರುವ ನಟಿ ರಶ್ಮಿಕಾ ಮಂದಣ್ಣ, ನನ್ನ ಉತ್ತರ ಏನಿರಬಹುದು ? ಎಂದು ಕೇಳುವ ಮೂಲಕ ಅಭಿಮಾನಿಗಳಿಗೆ ಪ್ರಶ್ನೆ ಹಾಕಿದ್ದಾರೆ.. ಕಿರಿಕ್ ಬೆಡಗಿ ತಂದೆ ಬಗ್ಗೆ ಹೇಳಿರುವ ಈ ಮಾತುಗಳು ಹಲವಾರು ಹೆಣ್ಣುಮಕ್ಕಳಿಗೆ ತಂದೆ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಹಾಗಿದೆ..

Trending

To Top