Film News

ಡ್ಯಾನ್ಸ್ ಮಾಡುತ್ತಾ ವೇದಿಕೆಯಿಂದ ಬಿದ್ದ ರಣವೀರ್ ಸಿಂಗ್ ವೀಡಿಯೋ ವೈರಲ್ !

ಬಾಲಿವುಡ್ ನಟ ರಣವೀರ್ ಸಿಂಗ್ ಡ್ಯಾನ್ಸ್ ಮಾಡುವುದರಲ್ಲಿ ಅವರಿಗೆ ಅವರೇ ಸಾಟಿ. ಅವರ ಡ್ಯಾನ್ಸ್ ಮೂವ್‌ಮೆಂಟ್ಸ್ ನೋಡಿದರೆ ಅವರ ಟೈಮಿಂಗ್, ಸ್ಟೈಲ್ ಉಳಿದವರಿಗಿಂತಲೂ ಸ್ವಲ್ಪ ಭಿನ್ನವಾಗಿರುತ್ತದೆ ಅನ್ನಿಸುತ್ತದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ರಾಮ್ ಲೀಲಾ ಚಿತ್ರದಲ್ಲಿನ ನಗಡಾ ಸಾಂಗ್ ಡೋಲು ಬಾಜೆಗೆ ಹಾಡಿಗೆ ಸ್ಟೆಪ್ ಹಾಕಿದರು. ರಣವೀರ್ ಅದ್ಭುತವಾಗಿ ಡ್ಯಾನ್ ಮಾಡುತ್ತಾ ಶೋನಲ್ಲಿದ್ದವರನ್ನು ರಂಜಿಸುತ್ತಿದ್ದರು. ಅಷ್ಟರಲ್ಲೇ ಒಂದು ಸಣ್ಣ ಎಡವಟ್ಟಾಯಿತು. ಈ ಹಾಡಿಗಾಗಿ ವೇದಿಕೆ ಮೇಲೆ ದೊಡ್ಡದಾದ ಡೋಲಿನ ಮಾದರಿಗಳನ್ನು ಇಡಲಾಗಿತ್ತು. ರಣವೀರ್ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ಡೋಲ್‌ಗಳನ್ನು ಬಾರಿಸುತ್ತಿದ್ದರು. ಒಂದು ಡೋಲ್ ಮೇಲಿರುವ ಬಟ್ಟೆ ಹರಿದು ಹೋಯಿತು. ಅವರು ಬಂದ ರಭಸಕ್ಕೆ ಆ ದೊಡ್ಡ ದೋಲಿನಲ್ಲಿ ತಲೆಕೆಳಗಾಗಿ ಬಿದ್ದರು!
ಅದುವರೆಗೂ ಹಾಡನ್ನು ಎಂಜಾಯ್ ಮಾಡುತ್ತಿದ್ದವರು ಅಚಾನಕ್ ಆಗಿ ನಡೆದ ಈ ಘಟನೆಯಿಂದ ಶಾಕ್ ಆದರು! ಕೆಲವರು ಎದ್ದು ಬಿದ್ದು ನಗಾಡಿದರು. ಕೂಡಲೆ ವೇದಿಕೆ ಮೇಲೆ ಇದ್ದ ಸಹ ನೃತ್ಯಗಾರರು, ಸಹಾಯಕರು ರಣವೀರ್ ಅವರನ್ನು ಹೇಗೋ ಕಷ್ಟಪಟ್ಟು ಹೊರಗೆಳೆದರು. ರಣವೀರ್ ಪರಿಸ್ಥಿತಿ ಜೀವ ಬಾಯಿಗೆ ಬಂದತಾಗಿತ್ತು! ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

https://youtu.be/ox5thonGSWI

Trending

To Top