gossip

ಡೈರೆಕ್ಟರ್ ಪ್ರಕಾಶ್ ಕೊವೆಲಮುಡಿ ಅವರ ಜೊತೆಗೆ ವಿವಾಹದ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ ಕಡಲ ಕಿನ್ನರಿ ಅನುಷ್ಕಾ ಶೆಟ್ಟಿ!

ನಟಿ ಅನುಷ್ಕಾ ಶೆಟ್ಟಿ ವಿವಾಹ ಕುರಿತು ನಿರಂತರವಾಗಿ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ ಬೇಸರಗೊಂಡಿರುವ ಅನುಷ್ಕಾ, ಯಾರ‍್ಯಾರಿಗೋ ಸಂಬಂಧ ಕಲ್ಪಿಸುವುದರಿಂದ ನನ್ನ ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸೂಪರ್ ಹಿಟ್ ಚಿತ್ರ ಬಾಹುಬಲಿ ನಂತರ ಪ್ರಭಾಸ್ ಮತ್ತು ಅನುಷ್ಕಾ ಸಪ್ತಪದಿ ತುಳಿಯಲಿದ್ದಾರೆ ಎಂಬ ವದಂತಿ ಈ ಹಿಂದೆ ಹಬ್ಬಿತ್ತು. ಆದರೆ, ಇಬ್ಬರು ಕಲಾವಿದರು ಅದನ್ನು ತಳ್ಳಿ ಹಾಕಿದ್ದರು. ಬಳಿಕ ಹೆಸರೇಳದ ಕ್ರಿಕೆಟಿಗನೊಬ್ಬನ ಜತೆ ಅನುಷ್ಕಾ ಹೆಸರು ತಳುಕು ಹಾಕಿಕೊಂಡಿತ್ತು. ಈ ವೇಳೆಯೂ ಸಹ ವದಂತಿ ಅಲ್ಲಗೆಳೆದಿದ್ದ ಅನುಷ್ಕಾ, ನನ್ನ ಮದುವೆ ನಿರ್ಧಾರವನ್ನು ನನ್ನ ಕುಟುಂಬಕ್ಕೆ ಬಿಟ್ಟಿದ್ದೇನೆ. ಖಂಡಿತವಾಗಿ ನನ್ನದು ಅರೇಂಜ್ ಮ್ಯಾರೇಜ್ ಆಗಿರುತ್ತದೆ ಎಂದು ತಿಳಿಸಿದ್ದರು.

ಇಷ್ಟೆಲ್ಲ ಸ್ಪಷ್ಟನೆ ನೀಡಿದರೂ ಇತ್ತೀಚೆಗಷ್ಟೇ ಅನುಷ್ಕಾ ಕುರಿತು ಮತ್ತೊಂದು ವದಂತಿ ಹುಟ್ಟುಕೊಂಡಿತ್ತು.

ಜಡ್ಜ್ಮೆಂಟಲ್ ಹೈ ಕ್ಯಾ ಚಿತ್ರದ ನಿರ್ದೇಶಕ ಪ್ರಕಾಶ್ ಕೊವೆಲಮುಡಿ ಅವರನ್ನು ಅನುಷ್ಕಾ ವರಿಸಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು.

ತಮ್ಮ ಮುಂದಿನ ನಿಶ್ಯಬ್ಧಂ ಚಿತ್ರದ ಪ್ರಚಾರ ವೇಳೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅನುಷ್ಕಾ, ವದಂತಿಗಳನ್ನು ಯಾರು ಹರಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಅದರಿಂದ ಖಂಡಿತವಾಗಿ ನನ್ನ ಕುಟುಂಬಕ್ಕೆ ಸಮಸ್ಯೆಯಾಗುತ್ತದೆ. ನಾನು ಏನೆಂಬುದು ನನ್ನ ಜತೆ ಆಪ್ತರಾಗಿರುವವರಿಗೆ ತಿಳಿದಿದೆ. ನಾನು ಯಾವುದೇ ಗಾಸಿಪ್ಗೆ ಮಹತ್ವ ನೀಡುವುದಿಲ್ಲ. ಆದರೂ, ಗಾಸಿಪ್ನಿಂದ ಕುಟುಂಬಕ್ಕೆ ತೊಂದರೆಯಾಗುತ್ತದೆ ಎಂದಿದ್ದಾರೆ

Trending

To Top