ಡಿಬಾಸ್ ಮತ್ತು ರಾಕಿ ಭಾಯ್ ಮಾತನಾಡಿರುವ ಹಳೆಯ ಆಡಿಯೋ ಒಂದು ಸಖತ್ ವೈರಲ್ ಆಗಿದೆ!

ಯಶ್ ಮತ್ತು ದರ್ಶನ್ ಮಧ್ಯೆ ಎಲ್ಲವೂ ಭಿನ್ನಾಭಿಪ್ರಾಯಗಳು ಇವೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ, ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿದಾಗ ಅವರ ಅಂತ್ಯ ಕ್ರಿಯೆ ಕಾರ್ಯಗಳಲ್ಲಿ ಯಶ್ ಮತ್ತು ದರ್ಶನ್ ಒಟ್ಟಾಗಿ ನಿಂತಿದ್ದರು. ಈ ಮೂಲಕ ಇದು ಸುಳ್ಳು ಎಂದು ಸಾಬೀತು ಮಾಡಿದ್ದರು.

ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಚುನಾವಣೆಗೆ ನಿಂತಾಗ ಜೋಡೆತ್ತಿನಂತೆ ಕೆಲಸ ಮಾಡಿದ್ದರು. ಈ ಮೂಲಕ ಕುಮಾರಸ್ವಾಮಿ ಮಗ ನಿಖಿಲ್ ವಿರುದ್ಧ ಸುಮಲತಾ ಗೆಲ್ಲುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು.

ಈ ಬೆಳವಣಿಗೆ ನಂತರ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಯಶ್ ಮಗಳು ಆಯ್ರಾ ಜನ್ಮದಿನದಂದು ದರ್ಶನ್ ಆಗಮಿಸಿದ್ದರು. ಇಬ್ಬರೂ ಈಗ ಉತ್ತಮ ಗೆಳೆಯರಾಗಿದ್ದಾರೆ. ಈಗ ಕಾರ್ಯಕ್ರಮ ಒಂದರಲ್ಲಿ ಇಬ್ಬರೂ ಮಾತನಾಡಿಕೊಂಡಿರುವ ಆಡಿಯೋ ತುಣುಕು ವೈರಲ್ ಆಗಿದೆ.

Previous articleಲಾಕ್ ಡೌನ್ ನಲ್ಲಿ ಡಾಲಿ ಮತ್ತು ಚಿಟ್ಟೆ ಜೊತೆಯಾಗಿ ಏನ್ ಮಾಡ್ತಿದ್ದಾರೆ ನೋಡಿ !
Next articleದೇವಸ್ಥಾನಗಳ ಪದ್ಧತಿ ಬಗ್ಗೆ ಮಾತನಾಡಿದ್ದಕ್ಕಾಗಿ ನಟಿ ಜ್ಯೋತಿಕಾ ಸುತ್ತ ಹೊಸ ವಿವಾದ !