Film News

ಟ್ವಿಟರ್ ನಲ್ಲಿ ರಾಕಿ ಭಾಯ್ ಹೊಸ ದಾಖಕೆ

ಕೆಜಿಎಫ್ ಸಿನಿಮಾ ನಂತರ ನಟ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಸಿನಿಮಾಗಿಂತ ಮೊದಲು ಕರ್ನಾಟಕದಲ್ಲಿ ಯಶ್ ಅವರಿಗೆ ಸಹಸ್ರಾರು ಅಭಿಮಾನಿಗಳಿದ್ದರು ಆದರೆ ಕೆಜಿಎಫ್ ನಂತರ ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ಹಾಗೂ ಹೊರದೇಶಗಳಲ್ಲೂ ಯಶ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

ಯಶ್ ಅವರ ಬಗ್ಗೆ ಯಾವುದೇ ಸುದ್ದಿ ಬಂದರೂ ಯಶ್ ಅಭಿಮಾನಿಗಳು ಆ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅವುಗಳನ್ನು ಟ್ರೆಂಡ್ ಮಾಡುತ್ತಾರೆ. ಯಶ್ ಅವರ ಸಿನಿಮಾ ಕುರಿತಾದ ವಿಷಯಗಳು, ಯಶ್ ಅವರ ಕುಟುಂಬದ ಫೋಟೋಗಳು ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತವೆ. ಇನ್ನು ಟ್ವಿಟರ್ ವಿಷಯಕ್ಕೆ ಬಂದರೆ, ಎಲ್ಲಾ ಸೆಲೆಬ್ರಿಟಿಗಳ ಟ್ವೀಟ್ ಗಳು ರೀಟ್ವೀಟ್ ಆಗುತ್ತವೆ.

ಹಾಗೆಯೇ ಭಾರತದ ಎಲ್ಲಾ ಸೆಲೆಬ್ರಿಟಿಗಳಲ್ಲಿ ಅತಿಹೆಚ್ಚು ರೀಟ್ವೀಟ್ ಆಗಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಯಶ್ ಹೆಸರು ಕಾಣಿಸಿಕೊಂಡಿದೆ. ಈ ಮೂಲಕ ಈ ಪಟ್ಟಿಯಲ್ಲಿರುವ ಒಬ್ಬರೇ ಕನ್ನಡ ನಟರಾಗಿದ್ದಾರೆ ಯಶ್. ಈ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದುಕೊಂಡಿದ್ದಾರೆ ಯಶ್, 1496 ಬಾರಿ ಯಶ್ ಅವರ ಟ್ವೀಟ್ ರೀಟ್ವೀಟ್ ಆಗಿವೆ. ಈ ಸಂತೋಷದ ವಿಷಯವನ್ನು ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರೀಟ್ವೀಟ್ ಆದ ಪಟ್ಟಿಯಲ್ಲಿ ಟಾಲಿವುಡ್ ನಟ ಜ್ಯೂನಿಯರ್ ಎನ್.ಟಿ.ಆರ್ ಹೆಸರು ಮೊದಲ ಸ್ಥಾನ ಪಡೆದುಕೊಂಡಿದೆ. ಅವರ ಹೆಸರಿನಲ್ಲಿ 13,118 ಬಾರಿ ರೀಟ್ವೀಟ್ ಆಗಿದೆ. 2ನೇ ಸ್ಥಾನದಲ್ಲಿ ಕಾಲಿವುಡ್ ನಟ ರಜನಿಕಾಂತ್ ಇದ್ದಾರೆ. 10,362 ಬಾರಿ ರೀಟ್ವೀಟ್ ಆಗಿದೆ. 3ನೇ ಸ್ಥಾನದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್,, 6,312 ಬಾರಿ ರೀಟ್ವೀಟ್ ಆಗಿದೆ.

ನಟ ಯಶ್ ಹೆಸರಿನ ನಂತರ ಖ್ಯಾತ ನಟ ಅಮೀರ್ ಖಾನ್, ಹೃತಿಕ್ ರೋಷನ್, ಮೋಹನ್ ಲಾಲ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಸಮಂತಾ, ಕಾಜಲ್ ಅಗರ್ ವಾಲ್ ಮುಂತಾದವರ ಹೆಸರಗಳು ಪಟ್ವಿಯಲ್ಲಿ ಕಾಣಿಸಿಕೊಂಡಿದೆ.

Trending

To Top