Film News

ಟ್ವಿಟರ್ ನಲ್ಲಿ ಟ್ರೋಲ್ ಆದ ಡಿಬಾಸ್

ಪ್ರಪಂಚದ ಎಲ್ಲಾ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಂಚಿಕೊಂಡರೂ ಸುದ್ದಿಯಾಗುತ್ತದೆ. ಅವರ ಪೋಸ್ಟ್ ಗಳಲ್ಲಿನ ಪದಬಳಕೆ, ಫೋಟೋಗಳು, ಅವರು ಎಲ್ಲವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ ನೆಟ್ಟಿಗರು. ಅವುಗಳಲ್ಲಿ ಸ್ವಲ್ಪ ತಪ್ಪು ಕಂಡುಬಂದರೂ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡಲು ಶುರುಮಾಡುತ್ತಾರೆ.

ಇದೇ ಕಾರಣಕ್ಕೆ ಸ್ಯಾಂಡಲ್ ವುಡ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಟ್ರೋಲ್ ಆಗಿದ್ದಾರೆ. ಇದೇ ತಿಂಗಳು ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ, ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಅವರ ಜಯಂತಿ ದಿನದಂದು ಟ್ವೀಟ್ ಮಾಡಿ ಶುಭಕೋರಿ ಜೊತೆಗೆ ಜನತೆಗೆ ಸುರಕ್ಷಿತವಾಗಿರಲು ಕೋರಿದ್ದರು ದರ್ಶನ್..
“ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ಧಿಕ ಶುಭಾಶಯಗಳು. ಆದಷ್ಟು ಬೇಗ ನಮ್ಮ ಬೆಂಗಳೂರು ಸಹಜ ಸ್ಥಿತಿಗೆ ಮರಳಲಿ..” ಎಂದು ಟ್ವೀಟ್ ಮಾಡಿದ್ದರು.
ಆದರೆ ಕೆಂಪೇಗೌಡ ಅವರ ಬದಲಾಗಿ ಸಂಗೊಳ್ಳಿ ರಾಯಣ್ಣ ಅವರ ಫೋಟೋ ಹಾಕಿ ಟ್ರೋಲ್ ಆಗಿದ್ದಾರೆ.

ಈ ಫೋಟೋ ಪೋಸ್ಟ್ ಮಾಡಿದ ಕೂಡಲೇ ‘ರಾಜವೀರ ಮದಕರಿ ನಾಯಕರ ಪ್ರತಿಮೆಗೆ ಕೆಂಪೇಗೌಡ ಎಂದರೆ ಹೆಂಗೆ ?’ ಎಂದು ಟ್ವೀಟ್ ಮಾಡಿದ್ದಾರೆ ನೆಟ್ಟಿಗರು..

“🤣😂😁😀
ಅಲ್ಲಿರೋ ಫೋಟೋದಲ್ಲಿ ಇರೋದು
ರಾಜಾ ವೀರ ಮದಕರಿ ನಾಯಕರ ಪ್ರತಿಮೆ
ಚಿತ್ರದುರ್ಗದಲ್ಲಿ ತಾವೇ ಮಾಲಾರ್ಪಣೆ ಮಾಡಿ ಈಗ ಅದೇ ಸ್ಟ್ಯಾಚ್ಯೂ ಇರೋ ಫೋಟೋ ಹಾಕಿ ಕೆಂಪೇಗೌಡ ಅಂತಾರಲ್ಲ ಏನ್ ಹೇಳ್ಬೇಕು ಇಂತೋರಿಗೆ.😂😁😀..” ಈ ರೀತಿಯಲ್ಲಿ ರಿಪ್ಲೈ ಮಾಡಿ ದರ್ಶನ್ ರನ್ನು ಟ್ರೋಲ್ ಮಾಡುತ್ತಿದ್ದಾರೆ ನೆಟ್ಟಿಗರು.

Trending

To Top