Film News

ಜ್ಯೂನಿಯರ್ ಚಿರು ಜೊತೆ ಸರ್ಜಾ ಕುಟುಂಬಕ್ಕೆ ಭೇಟಿ ನೀಡಿದ ಮೇಘನಾ !

ಮೂರು ವರ್ಷಗಳ ಹಿಂದೆ ಸರ್ಜಾ ಕುಟುಂಬಕ್ಕೆ ಸೊಸೆಯಾಗಿ ಬಂದ ಮೇಘನಾ ರಾಜ್ ಅವರು ಕುಟುಂಬದಲ್ಲಿ ಎಲ್ಲರ ಜೊತೆ ಹಾಗೂ ಪತಿ ಚಿರಂಜೀವಿ ಜೊತೆ ಖುಷಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಮೇಘನಾ ಬಾಳಲ್ಲಿ ವಿಧಿಯು ಬಿರುಗಾಳಿಯಂತೆ ಬಂದು ಜೂನ್ 7 ರಂದು ಚಿರು ಅವರನ್ನು ಮೇಘನಾರವರಿಂದ ದೂರಮಾಡಿಬಿಡ್ತು.

ಅಂತಹ ಸಂದರ್ಭದಲ್ಲಿ ಮೇಘನಾ ಅವರು ಗರ್ಭಿಣಿಯಾಗಿದ್ದರು, ಎಲ್ಲಾ ನೋವನ್ನು ಬಚ್ಚಿಟ್ಟುಕೊಂಡು ತನ್ನ ಮಗುವಿಗಾಗಿ ಎಲ್ಲವನ್ನು ಎದುರಿಸಿ ಬದುಕುತ್ತಿದ್ದಾರೆ.ಇದೀಗ ಮಗನ ರೂಪದಲ್ಲಿ ಚಿರು ಮತ್ತೆ ಬಂದಿದ್ದಾರೆ ಎಂಬ ನಂಬಿಕೆಯಿಂದ ಮೇಘನ ಮಗುವಿನ ಜೊತೆ ಖುಷಿಯಿಂದ ಕಾಲಕಳಿಯುತ್ತಿದ್ದಾರೆ. ಸರ್ಜಾ ಕುಟುಂಬಕ್ಕೆ ಹೋದರೆ ಎಲ್ಲಿ ಚಿರು ನೆನಪು ಕಾಡುತ್ತದೆ ಎಂದು ಚಿರು ಮನೆಗೆ ಹೋಗಿರಲಿಲ್ಲ, ಚಿರು ಅಗಲಿದ ದಿನದಿಂದ ತಮ್ಮ ತವರು ಮನೆಯಲ್ಲಿದ್ದರು.ಆದರೆ ಈಗ ಮೊದಲ ಬಾರಿ ಮಗನ ಜೊತೆ ಸರ್ಜಾ ಕುಟುಂಬಕ್ಕೆ ಬಂದಿದ್ದಾರೆ.

ಮೇಘನ ಮತ್ತು ಮಗುವನ್ನ ಮೈದುನ ಧ್ರುವ ಸರ್ಜಾ ಅವರೇ ಮೇಘನಾ ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾರೆ. ಈಗ ಮಗುವಿಗೆ 5 ತಿಂಗಳು ತುಂಬಿದ್ದು ಮಗನನ್ನ ಚಿರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಹಲವು ತಿಂಗಳ ನಂತರ ಬಂದ ಮೇಘನ ಮತ್ತು ಮಗುವನ್ನ ನೋಡಿ ಕುಟುಂಬಸ್ಥರು ತುಂಬಾ ಖುಷಿಯಾಗಿದ್ದಾರೆ. ಯುಗಾದಿ ಹಬ್ಬ ಮುಗಿದ ಬಳಿಕ ಚಿರು ಮೇಘನ ಮುದ್ದು ಕಂದನಿಗೆ ಒಳ್ಳೆಯ ದಿನದಂದು ನಾಮಕರಣ ಮಾಡಲು ಮನೆಯವರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ

Trending

To Top