Kannada Serials

ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ವೀಕ್ಷಕರಿಗೆ ಬೇಸರದ ಸುದ್ದಿ

ಕೊರೋನಾವೈರಸ್ ನಿಂದಾಗಿ ಎಲ್ಲಾ ಧಾರವಾಹಿ ಶೂಟಿಂಗ್ ಸ್ಥಗಿತವಾಗಿದೆ. ಹೀಗಾಗಿ ಮನೆಯಲ್ಲೇ ಕೂತು ಧಾರವಾಹಿ ನೋಡುತ್ತಾ ಕಾಲ ಕಳೆಯೋಣ ಎಂದರೆ ಅದಕ್ಕೂ ಶಾಕಿಂಗ್ ಸುದ್ದಿ ಸಿಕ್ಕಿದೆ.

ಈಗಾಗಲೇ ಕೆಲವು ದಿನಗಳವರೆಗೆ ಎಪಿಸೋಡ್ ಗಳನ್ನು ಶೂಟ್ ಮಾಡಿಟ್ಟುಕೊಂಡಿದ್ದರೂ ಅದು ಒಂದಲ್ಲಾ ಒಂದು ದಿನ ಮುಗಿಯಲೇ ಬೇಕಲ್ಲ? ಅದೇ ಕತೆಯಾಗಿದೆ ಈಗ ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಜೊತೆ ಜೊತೆಯಲಿ ಧಾರವಾಹಿಗೂ.

ಜೊತೆ ಜೊತೆಯಲಿ ಧಾರವಾಹಿ ಮಾರ್ಚ್ 31 ರವರೆಗೆ ಮಾತ್ರ ಕಂತು ಪ್ರಸಾರವಾಗಲಿದೆ. ಈಗಿನ ಪ್ರಕಾರ ಅಷ್ಟು ದಿನಗಳವರೆಗೆ ಮಾತ್ರ ಶೂಟಿಂಗ್ ಮಾಡಿಟ್ಟುಕೊಳ್ಳಲಾಗಿದೆ. ಅದಾದ ಬಳಿಕ ಸರ್ಕಾರ ಒಪ್ಪಿಗೆ ನೀಡಿದರೆ ಮಾತ್ರ ಶೂಟಿಂಗ್ ಮುಂದುವರಿಯಲಿದ್ದು, ಹೊಸ ಕಂತುಗಳು ಪ್ರಸಾರವಾಗಬಹುದು. ಇಲ್ಲದೇ ಹೋದರೆ ಮಾರ್ಚ್ 31 ರ ಬಳಿಕ ಹೊಸ ಕಂತುಗಳ ಪ್ರಸಾರವಿರದು.
ಅದೇ ರೀತಿ ಟಿಆರ್ ಪಿಯಲ್ಲಿ ನಂ.1 ಎನಿಸಿಕೊಂಡಿರುವ ಗಟ್ಟಿಮೇಳ ಧಾರವಾಹಿ ಕೂಡಾ ಏಪ್ರಿಲ್ 2 ರಿಂದ 3 ನೇ ತಾರೀಖಿನವರೆಗೆ ಮಾತ್ರ ಪ್ರಸಾರವಾಗಬಹುದು. ಅಷ್ಟು ದಿನಗಳವರೆಗೆ ಮಾತ್ರ ಎಪಿಸೋಡ್ ಬ್ಯಾಂಕಿಂಗ್ ಇದೆ. ಅದಾದ ಬಳಿಕ ಶೂಟಿಂಗ್ ಪ್ರಾರಂಭವಾಗದೇ ಇದ್ದರೆ ಹೊಸ ಕಂತುಗಳು ಪ್ರಸಾರವಾಗದು.

Trending

To Top