Film News

ಜೊತೆಜೊತೆಯಲಿ ಆರ್ಯವರ್ಧನ್ ಮೇಲೆ ಕೇಳಿಬಂತು ಒಂದು ದೂರು? ಏನದು?

‘ಜೊತೆ ಜೊತೆಯಲಿ’ ಧಾರಾವಾಹಿ ಹಲವು ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಟಿಆರ್‌ಪಿ ವಿಚಾರದಲ್ಲಿ ಈ ಧಾರಾವಾಹಿ ದಾಖಲೆ ಬರೆದಿದ್ದು, ಎಲ್ಲರಿಗೂ ತಿಳಿದಿರುವ ವಿಚಾರ. ಶ್ರೀಮಂತ ಉದ್ಯಮಿ ಆರ್ಯವರ್ಧನ್, ಸರಳ, ಸುಂದರ, ಬುದ್ಧಿವಂತ ಹುಡುಗಿ ಅನು, ಮಧ್ಯಮ ವರ್ಗದ ಪುಷ್ಫಾ ನಡವಳಿಕೆ ಇವೆಲ್ಲವೂ ಪ್ರೇಕ್ಷಕರಿಗೆ ತುಂಬ ಹತ್ತಿರವಾಗಿದೆ. ಈ ಸೀರಿಯಲ್‌ನ್ನು ತುಂಬ ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಧಾರಾವಾಹಿಯ ಟೈಟಲ್‌ ಟ್ರ್ಯಾಕ್ ತುಂಬ ದೊಡ್ಡಮಟ್ಟದಲ್ಲಿ ಸೌಂಡ್‌ ಮಾಡಿತ್ತು. ಆದರೆ ಆರ್ಯವರ್ಧನ್ ಪಾತ್ರದ ಬಗ್ಗೆ ಒಂದು ವಿಚಾರದಲ್ಲಿ ದೂರು ಕೇಳಿಬಂದಿದೆ. ಏನದು?

45 ವರ್ಷದ ಆರ್ಯವರ್ಧನ್‌ ಅಂತವರನ್ನು ಹುಡುಗಿಯರು ಇಷ್ಟಪಡುತ್ತಿದ್ದಾರೆ. ನಮ್ಮನ್ನು ತಿರುಗಿ ನೋಡುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ ಕೆಲ ಗಂಡುಮಕ್ಕಳು. ನಮ್ಮನ್ನು ಕೇಳುವವರೇ ಇಲ್ಲ ಎಂಬುದು ಕೆಲ ಗಂಡುಹೈಕಳ ಗೋಳು. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಬಾರಿ ಚರ್ಚೆಯಾಗ್ತಿದೆ, ಟ್ರೋಲ್ ಆಗುತ್ತಿವೆ. ಎಲ್ಲ ಹೆಣ್ಣುಮಕ್ಕಳು ಆರ್ಯವರ್ಧನ್ ಅಂತ ಅಂಕಲ್‌ಗಳನ್ನು ಇಷ್ಟಪಟ್ಟರೆ ನಾವೇನು ಮಾಡೋಣ ಎಂದು ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. ಇದು ತಮಾಷೆ ಎನಿಸಿದರೂ ಸತ್ಯ. ಆರ್ಯವರ್ಧನ್ ಪಾತ್ರ ತುಂಬ ಗಂಭೀರವಾದ ಪಾತ್ರವಾದರೂ ಕೂಡ ಮಾದರಿಯಾಗುವಂತಹ ಕ್ಯಾರೆಕ್ಟರ್ ಇದಾಗಿದೆ. ಹೀಗಾಗಿ ಸಹಜವಾಗಿಯೇ ಪ್ರೇಕ್ಷಕರು ಈ ಪಾತ್ರವನ್ನು ಒಪ್ಪಿಕೊಂಡು, ಮೆಚ್ಚಿದ್ದಾರೆ

Trending

To Top